ಹಳ್ಳದಲ್ಲಿ ಕೊಚ್ಚಿಹೋದವನ ಶವ ಪತ್ತೆ

Capture2
Published on

ಚಿಟಗುಪ್ಪ: ಎರಡು ದಿನ ಹಿಂದೆ ಅಪಾರ ಮಳೆಯಿಂದಾಗಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಒಬ್ಬನ ಶವ ಶುಕ್ರವಾರ ಮಾಡಗೂಳ ಕೆರೆಯಲ್ಲಿ ಪತ್ತೆಯಾಗಿದೆ. ಬೆಳಕೇರಾ ನಿವಾಸಿ ದತ್ತು ಶರಣಪ್ಪ (30) ಮೃತರು. ಹೊಲದಿಂದ ಮನೆಗೆ ಬರುವಾಗ ಘಟನೆ ನಡೆದಿದೆ. ಈತ ಮನೆಗೆ ಬರದಿದ್ದಾಗ ಚಿಟಗುಪ್ಪ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಶಾಸಕ ರಾಜಶೇಖರ ಪಾಟೀಲ್ ಮೃತನ ಮನೆಗೆ ಸಂಜೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು. ಅಧಿಕಾರಿಗಳ ಜತೆ ಚಚರ್ಿಸಿ ಕುಟುಂಬಕ್ಕೆ ಸಕರ್ಾರದಿಂದ 5 ಲಕ್ಷ ರೂ. ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷ ಮಾಣಿಕರಾವ, ಪ್ರಮುಖರಾದ ಶಿವಲಿಂಗಪ್ಪ ಪಾಟೀಲ್, ಅಫ್ಸರ್ಮಿಯಾ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net