ಹಳ್ಳದ ರಾಮೇಶ್ವರ ಸನ್ನಿಧಿಯಲ್ಲಿ ಹಾಡು ಬಿಡುಗಡೆ

30 ckm 3
ಚಿಕ್ಕಮಗಳೂರಿನ ಹಳ್ಳದ ರಾಮೇಶ್ವರ ದೇವಸ್ಥಾನದಲ್ಲಿ ಕಲ್ಕಟ್ಟೆ ಗಾನ ದೀವಿಗೆ ಸರಣಿಯ ಶ್ರೀ ಸ್ವಾಮಿ ಹಳ್ಳದ ರಾಮೇಶ್ವರ ಭಕ್ತಿಗೀತೆ ಲೋಕಾರ್ಪಣೆಗೊಳಿಸಲಾಯಿತು.
Published on

ಚಿಕ್ಕಮಗಳೂರು: ಸಂಗೀತ ಎಂದಿಗೂ ಸುರಗಂಗೆಯAತೆ, ಸಂಗೀತ ಎಂದಿಗೂ ರವಿಕಾಂತಿಯAತೆ. ಬಿಸಿಲಲಿ ತಂಗಾಳಿ ಹೊಸಜೀವ ತಂದAತೆ. ಆ ದೈವ ಸುಧೆಯಿಂದ ಪರಮಾರ್ಥವಂತೆ ಎಂದು ಹಿರಿಯರು ಹೇಳಿದ ಮಾತು ಅಕ್ಷರಶಃ ಸತ್ಯ. ನಾಗರಾಜರಾವ್ ಕಲ್ಕಟ್ಟೆ ಹಾಗೂ ಕೆ.ಎನ್.ನಾಗಭೂಷಣ್ ಜೋಡಿ ಚಿಕ್ಕಮಗಳೂರಿನಲ್ಲಿ ಇದೇ ರೀತಿಯಲ್ಲಿ ಭಕ್ತಿ ಸುಧೆಯ ಧಾರೆಯನ್ನು ಹರಿಸುತ್ತಿರುವುದು ಶ್ಲಾಘನೀಯ ಎಂದು ರಾಮೇಶ್ವರ ನಗರದಲ್ಲಿರುವ ಶ್ರೀ ಹಳ್ಳದ ರಾಮೇಶ್ವರ ದೇವಾಲಯ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ತಿಳಿಸಿದರು.

ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ ನಾಗರಾಜರಾವ್ ಅವರು ಎಚ್.ಎನ್.ಮಲ್ಲೇಶರಾವ್ ಸ್ಮರಣೆಯಲ್ಲಿ ಹೊರ ತರುತ್ತಿರುವ ಕಲ್ಕಟ್ಟೆ ಗಾನ ದೀವಿಗೆ ಸರಣಿಯ ಹದಿನೇಳನೇ ಕೃತಿ `ಶ್ರೀ ಸ್ವಾಮಿ ಹಳ್ಳದ ರಾಮೇಶ್ವರ ಭಕ್ತಿಗೀತೆಯನ್ನು ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಭಕ್ತಿಗೆ ಒಲಿಯದ ಭಗವಂತನಿಲ್ಲ, ಸಂಪೂರ್ಣ ಶರಣಾದರೆ ಮಹಾಶಕ್ತಿ ನಮಗೇ ಒದಗುತ್ತದೆ ಎಂದು ತಿಳಿಸಿದರು.

ನಿರ್ಮಾಪಕಿ ರೇಖಾ ನಾಗರಾಜರಾವ್ ಮಾತನಾಡಿ, ಭಕ್ತಿ ಚಳವಳಿಗಳು ಈ ನೆಲದ ಮಹತ್ವದ ಸಂಗತಿಗಳು. ವಚನಕಾರರು, ದಾಸರುಗಳು ತಮ್ಮ ಭಕ್ತಿ ರಚನೆಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದವರು. ಲೋಕದ ಡೊಂಕ ತಿದ್ದಿದವರು. ಸಂತ ಶಿಶುನಾಳ ಶರೀಫರೂ ಈ ಹಾದಿಯಲ್ಲಿ ಮುನ್ನಡೆದವರು. ಆಧುನಿಕ ಕಾಲದ ಭಕ್ತಿಗೀತೆಗಳಲ್ಲೂ ಕ್ಷೇತ್ರ ಪರಿಚಯ ಮತ್ತು ಕ್ಷೇತ್ರಾಚರಣೆಗಳ ಬಗೆಗಿನ ವಿವರಗಳ ಜೊತೆಯಲ್ಲಿ ಒಂದೆರಡು ಸಾಲುಗಳಲ್ಲಿ ಸಾಮಾಜಿಕ ಚಿಂತನೆಗಳನ್ನು ಬಿಂಬಿಸಲಾಗುತ್ತಿದೆ ಎಂದರು.

ಹಿನ್ನೆಲೆ ಸಂಗೀತ ನೀಡಿದ ಕೆ.ಎನ್.ನಾಗಭೂಷಣ್ ಮಾತನಾಡಿ, ಭಕ್ತಿ ಸಂಗೀತವು ಮನಸ್ಸಿಗೆ ಆಹ್ಲಾದ ನೀಡುವುದಲ್ಲದೆ, ಸಾತ್ವಿಕತೆಗೆ ಪ್ರೇರಣೆ ನೀಡುವಂತಿದ್ದರೆ ಮಾತ್ರ ಗಮನ ಸೆಳೆಯುತ್ತದೆ. `ಭಾವದಲೆಯಲಿ ಶಾರದೆ ಗಾನ ಗೀತೆಯ ಮೂಲಕ ನಾಡಿನ ಗಮನ ಸೆಳೆದ ಕಲ್ಕಟ್ಟೆಯವರು ಈ ಸರಣಿಯಲ್ಲಿ ತಮ್ಮ ಪ್ರತೀ ಹಾಡಿಗೂ ವಿಭಿನ್ನತೆಯ ಪ್ರಯೋಗ ಮಾಡುತ್ತಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ ಎಂದರು.

ಸೇವಾ ಸಮಿತಿಯ ಖಜಾಂಚಿ ಮಂಜಪ್ಪ ಶೆಟ್ಟಿ, ಕಾರ್ಯಾಧ್ಯಕ್ಷೆ ಮಮತಾ ಬಾಲಕೃಷ್ಣ, ಸಂತೋಷ್ ಜೈನ್, ಉಮೇಶ್ ಗೌಡ, ಅನಸೂಯಾ ರಾಜಾಚಾರ್, ಉಷಾಲತಾ ಬಾಬು, ಪ್ರೀತಿ ಯೋಗೀಶ್, ಅರ್ಚಕರಾದ ಸೂರ್ಯ ನಾರಾಯಣ ಭಟ್, ನಾಟಿ ವೈದ್ಯೆ ಶಾಂತಾ ಮಲ್ಲೇಶರಾವ್, ಬಾಳೆಹೊನ್ನೂರಿನ ರಾಜೀವಿ ವಿಠಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net