

ಶ್ರೀರಂಗಪಟ್ಟಣ : ತಾಲೂಕಿನ ದರಸಗುಪ್ಪೆ ಸಮೀಪ ಮಂಗಳವಾರ ಬೆಳಗ್ಗೆ ಪಾಂಡವಪುರ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಗೂಡ್ಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ಹಳ್ಳದ ಜಮೀನಿಗೆ ಪಲ್ಟಿಯಾಗಿದೆ. ರಸ್ತೆಯಲ್ಲಿರುವ ಸಾಕಷ್ಟು ಹಳ್ಳ-ಗುಂಡಿಗಳನ್ನು ಸುರಕ್ಷಿತವಾಗಿ ದಾಟಿಕೊಂಡು ಸಂಚರಿಸಲು ಮುಂದಾದ ಚಾಲಕ, ಅಡ್ಡಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡುವುದನ್ನು ತಪ್ಪಿಸಲು ಯತ್ನಿಸಿದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿತು. ಹಾವೇರಿಯಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಜಮೀನಿಗೆ ಪಲ್ಟಿಯಾದ ಸಂದರ್ಭ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಮತ್ತು ಕ್ಲೀನರ್ ಸ್ವಲ್ಪ ಗಾಯಗೊಂಡಿದ್ದು, ಟೌನ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಗೆ ಪ್ರಕರಣ ದಾಖಲಾಗಿದೆ.