ದೊಡ್ಡಬಳ್ಳಾಪುರ: ಹೊಲದಲ್ಲಿ ಹುಲ್ಲು ಕತ್ತರಿಸುವಾಗ ಸೋಮವಾರ ಪತ್ತೆಯಾದ ಸುಮಾರು 6 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞ ಪ್ರಶಾಂತ್ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಹಳೇಕೋಟೆಯ ಪುಟ್ಟರಾಯಪ್ಪ ಅವರ ಜೋಳದ ಹೊಲದಲ್ಲಿ ಅರಸರಾಜು ಎಂಬುವವರು ಹುಲ್ಲು ಕತ್ತರಿಸುತ್ತಿದ್ದಾಗ ಹೆಬ್ಬಾವು ಕಂಡಿದ್ದು, ತಕ್ಷಣವೇ ಅರಣ್ಯ ಇಲಾಖೆಯ ಗಮನಕ್ಕೆ ತರಲಾಯಿತು.