ಹಳೇ ವಾಸ್ತು ಶೈಲಿಯಂತೆ ದೇವರ ಅಗಸಿ ನಿರ್ಮಿಸಿ

Old Vastu style, Deva Agasi, Tehsildar office, Alamela,
ಆಲಮೇಲ ಪಟ್ಟಣದ ದೇವರ ಅಗಸಿಯನ್ನು ಹಳೇ ವಾಸ್ತು ಶೈಲಿಯಲ್ಲಿ ನಿರ್ಮಿಸಲು ಆಗ್ರಹಿಸಿ ತಹಸೀಲ್ದಾರ್ ಕಚೇರಿಯ ಕರ್ಕ್ ಶಕುಂತಲಾ ನಿಮಾದಾರ ಅವರಿಗೆ ಅವರಿಗೆ ಮನವಿ ಸಲ್ಲಿಸಿದರು. ರಾಜಹ್ಮದ ಬೆಣ್ಣೆಶಿರೂರ, ಸೈಪನ ಜಮಾದಾರ, ಅಲ್ ಹಜ್ ರೀದಸಾಬ ಸುಂಬಡ, ಆಮದ ವಾಲೀಕಾರ, ಜಹಾಂಗೀರ ಅಘಾನ, ನಾಗಪ್ಪ ತಳವಾರ ಇತರರಿದ್ದರು.
Published on

ಆಲಮೇಲ: ಹಳೆಯ ವಾಸ್ತು ಶೈಲಿಯ ಪ್ರಕಾರ ದೇವರ ಅಗಸಿ ನಿರ್ಮಿಸದಿದ್ದರೆ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ಸ್ಥಳೀಯ ಅಂಜುಮನ್ ಇಸ್ಲಾಂ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಾಜಹ್ಮದ ಬೆಣ್ಣೆಶಿರೂರ ನೇತೃತ್ವದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆಯ ಪದಾಧಿಕಾರಿಗಳು ಹಾಗೂ ಆಲಮೇಲ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕು ಅಧ್ಯಕ್ಷ ಸೈಪನ ಜಮಾದಾರ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಸಚಿವ ದಿ.ಎಂ.ಸಿ.ಮನಗೂಳಿ ಅವರು, ತಮ್ಮ ಅಧಿಕಾರ ಅವಧಿಯಲ್ಲಿ ಪಟ್ಟಣದ ಪೀರ ಗಾಲೀಬ ಶಹೀದರ ಪುರಾತನ ಕಾಲದ ದೇವರ ಅಗಸಿಯನ್ನು ಜೀರ್ಣೋದ್ಧಾರ ಮಾಡಲು ಅನುದಾನ ಬಿಡುಗಡೆಗೊಳಿಸಿ ಪುರಾತನ ಕಾಲದ ಶೈಲಿಯಲ್ಲಿಯೇ ದೇವರ ಅಗಸಿ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.

ನಂತರ ಪುರಾತನ ಕಾಲದ ಅಗಸಿಯನ್ನು ನೆಲಸಮ ಮಾಡಿ ಅವರ ಭರವಸೆಯ ಪ್ರಕಾರ ಹಳೆಯ ವಾಸ್ತು ಶೈಲಿಯ ಪ್ರಕಾರ ಕಾಮಗಾರಿ ನಡೆಸದೆ ಬೇರೆ ಶೈಲಿಯಲ್ಲಿ ಕಾಮಗಾರಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಹಳೆಯ ಪುರಾತನ ಶೈಲಿಯ ಪ್ರಕಾರ ಕಾಮಗಾರಿ ನಡೆಸದಿದ್ದರೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಕಚೇರಿಯ ಕರ್ಕ್ ಶಕುಂತಲಾ ನಿಮಾದಾರ ಮನವಿ ಸ್ವೀಕರಿಸಿದರು. ಮುಖಂಡರಾದ ಅಲ್ ಹಜ್ ರೀದಸಾಬ ಸುಂಬಡ, ಆಮದ ವಾಲೀಕಾರ, ಜಹಾಂಗೀರ ಅಘಾನ, ನಾಗಪ್ಪ ತಳವಾರ, ಹಸನಸಾಬ ಮುಲ್ಲಾ, ಗಾಲೀಬ ಸೌದಾಗರ, ಸೈಪನ ಮುಲ್ಲಾ, ರಫೀಕ ಜಮಾದಾರ, ಸಾಧಿಕ ಗೌಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net