ಹಳೇ ಪಿಂಚಣಿ ಜಾರಿಗೆ ಪಟ್ಟು

CTD 00004
Published on

ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಏಕೀಕೃತ ಪಿಂಚಣಿ ಯೋಜನೆ ವಿರೋಧಿಸಿ ಶುಕ್ರವಾರ ಸರ್ಕಾರಿ ಎನ್‌ಪಿಎಸ್ ನೌಕರರು ಕರ್ತವ್ಯ ಸ್ಥಳದಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ಹಳೇ ಪಿಂಚಣಿ ಮರು ಜಾರಿಗೆ ಒತ್ತಾಯಿಸಿದರು.
ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎನ್‌ಪಿಎಸ್ ನೌಕರರು ಹಲವು ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಆದರೆ, ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷೃ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಳೇ ಪಿಂಚಣಿ ಜಾರಿಗೊಳಿಸುವುದಾಗಿ ತಿಳಿಸಿತ್ತು. ಅದರಂತೆ ಈಗ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ, ತಹಸೀಲ್ದಾರ್, ಡಿಡಿಪಿಐ ಮತ್ತಿತರ ಇಲಾಖೆಗಳ ಕಚೇರಿಗಳಲ್ಲಿ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಎನ್‌ಪಿಎಸ್ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷ, ಡಿ.ಸಿ.ಪಾಟೀಲ್, ರವಿಕುಮಾರ್, ಅಜಯ್‌ಕುಮಾರ್, ಇಕ್ಬಾಲ್, ವಿನಯ್, ಕಲ್ಲೇಶ್‌ಡಿ.ಮೌರ್ಯ, ಅಜಯ್ಕುಮಾರ್, ರಾಜಪ್ಪ, ಬಸವರಾಜ್, ಕೆಪಿಟಿಸಿಎಲ್ ಮಂಜುನಾಥ್, ಕರಿಬಸಯ್ಯ, ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net