ಹಳೆಯ ಪಿಂಚಣಿ ಯೋಜನೆ ಜಾರಿಯಾಗಲಿ

1
ಬೈಲಹೊಂಗಲ ತಹಸೀಲ್ದಾರ್​ ಹಣಮಂತ ಶಿರಹಟ್ಟಿ ಅವರು ಶಿಕ್ಷಕರಿಂದ ಮನವಿ ಸ್ವೀಕರಿಸಿದರು. ಮುತ್ತುರಾಜ ಮತ್ತಿಕೊಪ್ಪ , ಅರ್ಜುನ ಕೋಣಿನವರ, ಮಂಜುನಾಥ ಸಂಗೊಳ್ಳಿ, ಎಸ್​.ಎಸ್​. ಪಾಟೀಲ, ಜೆ.ಎಸ್​. ಕಾಮೋಜಿ, ಆರ್​.ಬಿ. ಲಕ್ಕನಗೌಡರ ಇತರರಿದ್ದರು.
Published on

ಬೈಲಹೊಂಗಲ: ರಾಜ್ಯದ ಅನುದಾನಿತ ಶಾಲಾ&ಕಾಲೇಜುಗಳ ನೌಕರರ ಹಳೆಯ ನಿಶ್ಚಿತ ಪಿಂಚಣಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ&ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂದಿಂದ ಶನಿವಾರ ತಹಸೀಲ್ದಾರ್​ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತುರಾಜ ಮತ್ತಿಕೊಪ್ಪ ಮಾತನಾಡಿ, ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ 2006ಕ್ಕೂ ಪೂರ್ವ ನೇಮಕ ಹೊಂದಿ ನಂತರ ಅನುದಾನಕ್ಕೊಳಪಟ್ಟಿರುವ ಹಾಗೂ 2006 ನಂತರ ನೇಮಕ ಹೊಂದಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾಗಿರುವ ನೌಕರರಿಗೆ ಮುಂಬರುವ ಅಧಿವೇಶನದೊಳಗೆ ಹಳೇ ಪಿಂಚಣಿ ಸೌಲಭ್ಯ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಶಾಲಾ&ಕಾಲೇಜು ಬಂದ್​ ಮಾಡಿ ಬೃಹತ್​ ಹೋರಾಟ ನಡೆಸಲಾಗುವುದು ಎಂದರು. ಕೇವಲ ಸುಳ್ಳು ಭರವಸೆ ನೀಡುತ್ತ ಕಾಲಹರಣ ಮಾಡಿ ನೌಕರರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಪ್ರಾಥಮಿಕ ಶಾಲಾ ಶಿಕರ ಸಂದ ಪ್ರಧಾನ ಕಾರ್ಯದರ್ಶಿ ಅರ್ಜುನ ಕೋಣಿನವರ ಮಾತನಾಡಿ, ಅನುದಾನಿತ ಮತ್ತು ಸರ್ಕಾರಿ ನೌಕರರ ಪಿಂಚಣಿ ಬೇಡಿಕೆಯನ್ನು ಶ್ರೀ ಈಡೇರಿಸಬೇಕೆಂದು ಒತ್ತಾಯಿಸಿದರು.

ತಹಸೀಲ್ದಾರ್​ ಹಣಮಂತ ಶಿರಹಟ್ಟಿ ಮನವಿ ಸ್ವೀಕರಿಸಿದರು. ತಾಲೂಕು ದೆಹಿಕ ಶಿಕ್ಷಣ ಶಿಕರ ಸಂದ ಅಧ್ಯ ಮಂಜುನಾಥ ಸಂಗೊಳ್ಳಿ, ಶಿಕರ ಸಂಟನೆಗಳ ಪದಾಧಿಕಾರಿಗಳಾದ ಗುರುರಾಜ ಬೋಳನ್ನವರ, ವಿಠ್ಠಲ ಹುಣಶಿಕಟ್ಟಿ, ಬಸವರಾಜ ತಿಗಡಿ, ಎಸ್​.ಎಸ್​. ಪಾಟೀಲ, ಜೆ.ಎಸ್​. ಕಾಮೋಜಿ, ಆರ್​.ಬಿ. ಲಕ್ಕನಗೌಡರ, ಬಿ.ಉ. ತೋಟಗಿ, ಎಂ.ಐ. ಕುರಿ, ಪಿ.ಎಸ್​. ನೇಸರಗಿ, ಎಂ.ಎಸ್​. ಪೂಜಾರ, ಪಿ.ಟಿ. ಲಮಾಣಿ, ಜಿ.ಆರ್​. ಪೂಜಾರ, ಎಸ್​.ಐ. ಮೊರಬದ, ಎಸ್​.ಎಲ್​. ಭಜಂತ್ರಿ, ಆರ್​.ಬಿ. ಕುರೇರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net