

ಕೊಟ್ಟೂರು: ಹುಟ್ಟುವಾಗಲೇ ಯಾರೂ ಅಪರಾಧಿಗಳಾಗಿ, ಸಮಾಜಕ್ಕೆ ಕಂಟಕವಾಗಲು ಹುಟ್ಟಿರುವುದಿಲ್ಲ. ಕಳಂಕ ತ್ಯಜಿಸಿ, ಒಳ್ಳೆಯ ದಾರಿಯಲ್ಲಿ ಸಾಗುವ ಶಕ್ತಿ ಹಾಗೂ ಸಾಮರ್ಥ್ಯ ನಿಮ್ಮ ಕೈಯಲ್ಲಿದೆ ಎಂದು ವಿಜಯನಗರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಬಾಷಾ ರೌಡಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಠಾಣೆಯಲ್ಲಿ ಕೂಡ್ಲಿಗಿ ಉಪ ವಿಭಾಗ ವ್ಯಾಪ್ತಿಯ ಎಂಟು ಠಾಣೆಗಳ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಸೋಮವಾರ ಮಾತನಾಡಿದರು. ಮತ್ತೆ ಅಪರಾಧ ಎಸಗುತ್ತಾ ಹಳೆಯ ಚಾಳಿ ಮುಂದುವರಿಸಿದರೆ ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಗಡಿಪಾರು ಮಾಡಲು ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾತನಾಡಿ, ನೀವು ಸಮಾಜಕ್ಕೆ ಪೂರಕವಾಗಿರಬೇಕು ಹೊರತು ಮಾರಕವಾಗಬಾರದು. ನಿಮ್ಮಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಬೇಕು ಎಂದರು.