ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಹಳೆಗುಬ್ಬಿ ಗ್ರಾಮದ ನರಸಯ್ಯ ಎಂಬುವವರಿಗೆ ಸೇರಿದ ಮೇಕೆ ರೊಪ್ಪಕ್ಕೆ ಸೋಮವಾರ ಬೆಳಗಿನ ಜಾವ ಚಿರತೆ ನುಗ್ಗಿ ಮೇಕೆಯನ್ನು ಹೊತ್ತೊಯ್ದು ಸಾಯಿಸಿದೆ. ಮನೆಯ ಮುಂದೆ ತೆಂಗಿನ ಗರಿಗಳಿಂದ ಕಟ್ಟಿದ್ದ ರೊಪ್ಪದಿಂದ ಸಮೀಪದ ಪೊದೆಯೊಳಗೆ ಮೇಕೆಯನ್ನು ಎಳೆದುಕೊಂಡು ಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.