ಹಳೆ ವೈಷಮ್ಯ:ತಾ.ಪಂ ಮಾಜಿ ಸದಸ್ಯನ ಮೇಲೆ ಹಲ್ಲೆ

IMG-20250812-WA0008
Published on

ಹಳೆ ವೈಷಮ್ಯ:ತಾ.ಪಂ ಮಾಜಿ ಸದಸ್ಯನ ಮೇಲೆ ಹಲ್ಲೆ

ಚಿಕ್ಕೋಡಿ:ಹಳೆ ದ್ವೇಷದ ಹಿನ್ನಲೆ ಮಾಜಿ ತಾಲೂಕ ಪಂಚಾಯತ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡಿಸಿತುವ ಘಟನೆ ತಾಲೂಕಿನ ಮುಗಳಿ ಗ್ರಾಮದಲ್ಲಿ ಸೊಮವಾರ ನಡೆದಿದೆ.

ಗ್ರಾಮದ ರಾಜು ಪಾಟೀಲ ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಹಳೆ ವೈಷಮ್ಯ ಹಿನ್ನಲೆ ಅದೇ ಗ್ರಾಮದ ಸರ್ಕಾರಿ ಶಾಲೆ ಮುಖೋಪಾಧ್ಯಯ

ಈರಯ್ಯ ಗೊಟುರೆ ಹಾಗೂ ಅವರ ಮಗ ಪಂಚಾಕ್ಷರಿ ಗೊಟುರೆ ಹಲ್ಲೆ ಮಾಡಿದ್ದಾರೆ.

ಹಳೆ ದ್ವೇಷದಿಂದ ಹಲ್ಲೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net