ಹಳೆ ದ್ವೇಷ ಚಾಕುವಿನಿಂದ ಹಲ್ಲೆ

Crime_20251014231143157.jpg
Published on

ಹಳೆ ದ್ವೇಷ ಚಾಕುವಿನಿಂದ ಹಲ್ಲೆ

ಬೆಳಗಾವಿ: ಹಳೆ ದ್ವೇಷದ ಹಿನ್ನಲೆ ಯುವಕನೊರ್ವನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಇರ್ಫಾನ್ @ಯಾಸೀನ ರಫೀಕ ಮುಲ್ಲಾ(22) ,ಶಿವಾನಂದ ಚನ್ನಬಸನ್ನವರ ಹಲ್ಲೆಗೊಳಗಾಗಿದ್ದಾರೆ.ಆರೋಪಿತರು ಹಾಗೂ ಗಾಯಾಳು ನಡುವೇ ಕೆಲವು ದಿನಗಳ ಹಿಂದೆ ಕ್ಷುಲಕ ಕಾರಣಕ್ಕೆ ಜಗಳವಾಗಿತ್ತು‌.ಅದೇ ದ್ವೇಷದಿಂದ ಅದೆ ಗ್ರಾಮದ ಆರೋಪಿತರಾದ ಸುಶಾಂತ ಮಹೇಶ ಜರಳಿ,ಸೋಮೇಶ ಮಲ್ಲಪ್ಪ ಜರಳಿ,ಬಸವರಾಜ ಗುರವ ಸೇರಿಕೊಂಡು ಗಾಯಾಳುಗಳ ಮೇಲೆ ಕೇಬಲನಿಂದ ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲೇಖಿಸಿದ್ದಾರೆ.

ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net