

ಸಾಲಿಗ್ರಾಮ: ತಾಲೂಕಿನ ಹಳಿಯೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ರೇಖಾ, ಉಪಾಧ್ಯಕ್ಷರಾಗಿ ಎಸ್.ಎಸ್.ನೂತನ್ ಅವಿರೋಧವಾಗಿ ಆಯ್ಕೆಯಾದರು.
ಗ್ರಾ.ಪಂ.ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇಖಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಎಸ್.ನೂತನ್ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಉಪಾಧ್ಯಕ್ಷ ಎಸ್.ಎಸ್.ನೂತನ್ ಮಾತನಾಡಿ, ತಮ್ಮ ಅವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಲಭ್ಯ ಒದಗಿಸುವ ಜತೆಗೆ ಆಶ್ರಯ ಮನೆ, ರಸ್ತೆ, ಚರಂಡಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸದಸ್ಯರಾದ ಮಂಜುಳಮ್ಮ, ಕಾಂಚನಾ, ದಿನೇಶ, ಶ್ರೀನಿವಾಸ್, ಮಣಿ, ವಿನಯ್‌ಕುಮಾರ್, ಪಾರ್ವತಮ್ಮ, ಪ್ರವೀಣ್‌ಕುಮಾರ್, ಕಾವ್ಯಾ ರೇಣುಕಾ, ಹೇಮಲತಾ, ಕೃಷ್ಣಮೂರ್ತಿ, ಶ್ರೀನಿವಾಸ್, ಮಲ್ಲೇಶಾಚಾರಿ, ರಾಜೇಶ್ವರಿ, ಸಾದಿಕ್ ಭಾಗವಹಿಸಿದ್ದರು. ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಕುಮಾರ್, ಜಗದೀಶ್, ಪಿಡಿಓ ಚಿದಾನಂದ್ ಸೇರಿದಂತೆ ಮುಖಂಡರು ಇದ್ದರು.
.