ಹಳಿಂಗಳಿ ಶತಮಾನೋತ್ಸವ ಗ್ರಾಮಕ್ಕೆ ಸೀಮಿತವಾಗದಿರಲಿ

oplus_140509184
oplus_140509184
Published on

ತೆಲಸಂಗ: ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಧನವಂತ ಹಳಿಂಗಳಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗ್ರಾಮಕ್ಕೆ ಸೀಮಿತವಾಗದೆ ದೇಶದ ಕಾರ್ಯಕ್ರಮವಾಗಬೇಕು ಎಂದು ಮಾಜಿ ಶಾಸಕ ಶಹಜಾನ ಡೊಂಗರಗಾಂವ ಹೇಳಿದರು.

ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಧನವಂತ ಹಳಿಂಗಳಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಭಾರತೀಯರ ಒಗ್ಗಟ್ಟು ಮುರಿಯುವ ಬ್ರಿಟಿಷರೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ನಡುವೆ ಏಕತೆಯಿಂದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ, ಇಂಚಗೇರಿಯ ಮಾಧವಾನಂದ ಪ್ರಭುಜಿಯವರೊಂದಿಗೆ ಹೋರಾಟ ಆರಂಭಿಸಿದವರು ಈಗಲೂ ನಮ್ಮೊಂದಿಗಿರುವುದು ನಮ್ಮ ಹೆಮ್ಮೆ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿಜಿ ಅವರೊಂದಿಗೆ ಜೈಲು ಸೇರಿದ್ದ ಶತಾಯುಷಿಗಳ ಕಾರ್ಯಕ್ರಮಕ್ಕೆ ಎಲ್ಲರೂ ತೊಡಗಿಸಿಕೊಂಡು ಹೋರಾಟಗಾರ ಧನವಂತ ಹಳಿಂಗಳಿ ಅವರಿಗೆ ಗೌರವ ಸಲ್ಲಿಸೋಣ ಎಂದರು. ಮಂತ್ರಿಗಳು, ಶಾಸಕರು ಕಾರ್ಯಕ್ರಮಕ್ಕೆ ಆಹ್ವಾನಿಸಿ ಮೇ.೧೮ರಂದು ಗ್ರಾಮದ ಬಿವಿವಿ ಸಂಘದ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net