

ನಾಲತವಾಡ: ಇಲ್ಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಂಸ್ಕೃತಿಕ ಭವನದಲ್ಲಿ ನಾಲತವಾಡ ವಲಯ ಘಟಕದ ಕಸಾಪ ಹಾಗೂ ಬಸವ ಕೇಂದ್ರದ ಸಹಯೋಗದಲ್ಲಿ ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ಸಾಹಿತ್ಯ ಸಂಕರಕ್ಷಣಾ ದಿನ ಆಚರಿಸಲಾಯಿತು.
ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಎಂ.ಬಿ. ನಾವದಗಿ, ಅನುಭಾವ ಶಂಭುಲಿಂಗ ದುದ್ದಗಿ, ಕಸಾಪ ವಲಯ ಘಟಕದ ಅಧ್ಯಕ್ಷ ಡಾ. ಡಿ.ಆರ್. ಮಳಖೇಡ, ಬಿ.ಬಿ. ಪೂಜಾರಿ, ಎಂ.ಎನ್. ನ್ಯಾಮಗೌಡ, ಸಿಆರ್‌ಪಿ ಮಹಾಂತೇಶ ನೂಲಿನವರ, ಎಸ್.ಎ. ಜಿವಣಗಿಮಠ ಮಾತನಾಡಿ, ವಚನ ಸಾಹಿತ್ಯ ಮೂಲಕ ಸಮಾಜವನ್ನು ಕಟ್ಟುವಂತೆ ನಾವೆಲ್ಲ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಬೇಕಿದೆ ಎಂದರು.
ಪ್ರಭುಸ್ವಾಮಿ ಹಿರೇಮಠ, ನಿವೃತ್ತ ಪ್ರಾಂಶುಪಾಲ ಎಸ್.ಎನ್. ಕಂಗಳ, ಎ.ಎಸ್. ಪಟ್ಟಣಶೆಟ್ಟಿ, ಶರಣ ಸಾಹಿತ್ಯ ಪರಿಷತ್‌ನ ಬಸವರಾಜ ನಾಲತವಾಡ, ಮಲ್ಲಿಕಾರ್ಜುನ ಮೋಟಗಿ, ಎಸ್.ಎಚ್. ಲಮಾಣಿ, ರಾಜು ಹಾದಿಮನಿ, ಎಚ್.ಟಿ. ಕುರಿ, ಬಸವರಾಜ ಚಿನಿವಾಲರ, ನಿಂಗಣ್ಣ ಅಗ್ನಿ, ಅಮರೇಶ ತೊಂಡಿಹಾಳ ಇದ್ದರು.
ಶಿಕ್ಷಕ ವೀರೇಶ ನವಲಿ ಪ್ರಾರ್ಥಿಸಿದರು, ರಾಜು ಹಾದಿಮನಿ ನಿರೂಪಿಸಿದರು. ಪಿ.ಬಿ. ಕಮರಿ ಸ್ವಾಗತಿಸಿದರು. ಬಿ.ಬಿ. ಪೂಜಾರಿ ವಂದಿಸಿದರು.