ಹಲ್ಲೆಗೊಳಗಾದ ಯುವತಿ ಸಾವು

SAVITHA
Published on

ಯಾದಗಿರಿ: ಚಾಕುವಿನಿಂದ ಮಾರಣಾಂತಿಕ ಹಲ್ಲೆಗೊಳಗಾದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿ ಜಿಮ್ಸ್ನಲ್ಲಿ ಸೋಮವಾರ ಮೃತಪಟ್ಟಿದ್ದಾಳೆ.

ಘಟನೆ ವಿವರ: ತಾಲೂಕಿನ ಮುದ್ನಾಳ್ ದೊಡ್ಡ ತಾಂಡಾ ನಿವಾಸಿ ಸವಿತಾ ರಾಠೋಡ್ (35) ಮೃತಪಟ್ಟ ದುದರ್ೈವಿ. ಶನಿವಾರ ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ದುಷ್ಕಮರ್ಿಗಳು ಆಕೆಯನ್ನು ಹಿಂಬಾಲಿಸಿ, ಅತ್ಯಾಚಾರ ನಡೆಸಿ, ಚಾಕುವಿನಿಂದ ಕುತ್ತಿಗೆ ಹಾಗೂ ಕಿವಿಗೆ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ಸ್ಥಳೀಯರು ಗಮನಿಸಿ ಆಕೆಯನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾಳೆ. ಸವಿತಾ ತಂದೆ-ತಾಯಿ ಇಲ್ಲದ ಅನಾಥೆ. ಇರುವ ಒಬ್ಬ ಸಹೋದರ ವಿಕಲಚೇತನ. ಇಷ್ಟು ದಿನ ಕಂಕಣಭಾಗ್ಯ ಕೂಡಿ ಬಂದಿರಲಿಲ್ಲ. ಆದರೆ, ಕಳೆದ ಐದಾರು ದಿನಗಳ ಹಿಂದಷ್ಟೆ ಆಕೆಗೆ ಮದುವೆ ನಿಶ್ಚಿಯವಾಗಿತ್ತು.

ತಾಂಡಾದ ನಿವಾಸಿ ಸಚಿನ್ ಮತ್ತಿತರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net