ಹಲ್ಲೆಗೊಳಗಾಗಿದ್ದ ವ್ಯಕ್ತಿ ನಾಪತ್ತೆ

15-pnp 2 ningegowda
ಕಾಣೆಯಾಗಿರುವ ನಿಂಗೇಗೌಡ
Published on

ಪಾಂಡವಪುರ: ತಾಲೂಕಿನ ಅರಕನಕೆರೆ ಗ್ರಾಮದಲ್ಲಿ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಗ್ರಾಮದ ನಿಂಗೇಗೌಡ(65)ಹಲ್ಲೆಗೊಳಗಾಗಿ ಕಾಣೆಯಾಗಿರುವ ವ್ಯಕ್ತಿ. ಜಮೀನು ವಿಚಾರವಾಗಿ ನಿಂಗೇಗೌಡ ಅದೇ ಗ್ರಾಮದ ಪ್ರಕಾಶ, ಕುಳ್ಳೇಗೌಡ, ಕೆಂಪಮ್ಮ, ಪೂರ್ಣಿಮ, ಸಣ್ಣಹೈದೇಗೌಡ, ಮಧು, ಅಣ್ಣೇಗೌಡ, ಪ್ರೇಮಮ್ಮ ನಡುವೆ ಗಲಾಟೆ ಏರ್ಪಟ್ಟು ಆರೋಪಿಗಳು ನಿಂಗೇಗೌಡ ಮತ್ತು ಪತ್ನಿ ಕೆಂಪಮ್ಮ ಮೇಲೆ ಕಲ್ಲು, ದೊಣ್ಣೆ ಮತ್ತು ಚೂರಿಗಳಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸೆ.19ರಂದು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ನಿಂಗೇಗೌಡ ಅವರ ಮಗ ಎ.ಎನ್.ಅಶ್ವಥ್ ದೂರು ದಾಖಲಿಸಿದ್ದಾರೆ.

ನಿಂಗೇಗೌಡ ಅ.7ರಂದು ಬೆಳಗ್ಗೆ 8 ಗಂಟೆಯಲ್ಲಿ ಮನೆಯವರ ಬಳಿ ಸಾವಿರ ರೂ. ಪಡೆದು ಯಾರಿಗೂ ಹೇಳದೆ ಹೊರ ಹೋದವರು ಈವರೆಗೂ ವಾಪಸ್ ಬಂದಿಲ್ಲ. ಗಲಾಟೆಯಾಗಿ ಹಲ್ಲೆಗೊಳಗಾದ ನಂತರ ಮಾನಸಿಕವಾಗಿ ನೊಂದು ಮೌನಕ್ಕೆ ಶರಣಾಗಿದ್ದರು. ಮನನೊಂದು ಅವರು ಮನೆ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ : ತುಂಬು ತೋಳಿನ ಬಿಳಿ ಶರ್ಟ್, ಖಾಕಿ ನಿಕ್ಕರ್, ಹಸಿರು ಶಾಲು ಧರಿಸಿದ್ದರು. ತೆಳ್ಳನೆ ಮೈಕಟ್ಟು, ಗೋಧಿ ಮೈಬಣ್ಣ, ಐದು ಅಡಿ ಎತ್ತರ ಇದ್ದಾರೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net