ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು

ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು
Published on

ಅರಸೀಕೆರೆ: ತಾಲೂಕಿನ ಭೋವಿ ಸಮಾಜದ ಮುಖಂಡ ಉಮಾಶಂಕರ್ ಮೇಲಿನ ಹಲ್ಲೆ ಖಂಡಿಸಿ ಗ್ರಾಮಾಂತರ ಠಾಣೆ ಎದುರು  ಅಂಬೇಡ್ಕರ್ ಪೋಟೋ ಹಿಡಿದು ಭೋವಿ  ಸಮಾಜ ಸೇರಿ ವಿವಿಧ ದಲಿತ ಸಂಘಟನೆ ಮುಖಂಡರು ಸೋಮವಾರ ಮಧ್ಯಾಹ್ನ ದಿಂದ  ಧರಣಿ ಆರಂಭಿಸಿದ್ದಾರೆ.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮುರುಂಡಿ ಶಿವಯ್ಯ ಹಾಗೂ ಮತ್ತವರ ಕುಟುಂಬ ಸದಸ್ಯರು ನಿಂದಿಸಿ ಹಲ್ಲೆ ಮಾಡಿದ್ದಾರೆ. ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ.ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಹೋರಾಟ ಹಿಂಪಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಮುಖಂಡರಾದ ಭೈರೇಶ್,ಯಾದಾಪುರ ನಾರಾಯಣ ಮೂರ್ತಿ, ಉಮೇಶ್,  ಸಣ್ಣಪ್ಪ, ಮೀನಾಕ್ಷಿ ಚಂದ್ರು ಸೇರಿ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net