ಹಲ್ಲೆ ಖಂಡಿಸಿ ದುರ್ಗದಲ್ಲಿ ವಕೀಲರ ಪ್ರತಿಭಟನೆ

CTD STRIKE.....
Published on

ಚಿತ್ರದುರ್ಗ: ಹೈಕೋರ್ಟ್ ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ನಗರದಲ್ಲಿ ಸೋಮವಾರ ವಕೀಲರು ಪ್ರತಿಭಟನೆ ನಡೆಸಿದರು.

ಕೆಂಪುಪಟ್ಟಿ ಧರಿಸಿ ಕೋರ್ಟ್ ಆವರಣದಿಂದ ಡಿಸಿ ಕಚೇರಿಗೆ ಮೆರವಣಿಗೆ ನಡೆಸಿ, ಆರೋಪಿತರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭಾರತೀಯ ವಕೀಲರ ಪರಿಷತ್ ಉಪಾಧ್ಯಕ್ಷ, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಸದಾಶಿವರೆಡ್ಡಿ ಅವರ ಕಚೇರಿಗೆ ಕಳೆದ 14ರಂದು ನುಗ್ಗಿದ ದುಷ್ಕರ್ಮಿಗಳು, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಕೀಲರ ಸಂರಕ್ಷಣೆ ಕಾಯ್ದೆಗಳು ಜಾರಿಯಾಗಿದ್ದರೂ ವಕೀಲರ ಮೇಲೆ ಹಲ್ಲೆಗಳು ನಿಂತಿಲ್ಲ.

ಇದರಿಂದ ವಕೀಲರಲ್ಲಿ ಆತಂಕ ಎದುರಾಗಿದೆ. ವಕೀಲರ ಸಂರಕ್ಷಣಾ ಕಾಯ್ದೆ ಇನ್ನಷ್ಟು ಬಲಪಡಿಸಬೇಕು. ಇಂಥ ಘಟನೆಗಳಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ‌್ಯದರ್ಶಿ ಆರ್.ಗಂಗಾಧರ್, ಜಂಟಿ ಕಾರ‌್ಯದರ್ಶಿ ಬಿ.ಗಿರೀಶ್, ಖಜಾಂಚಿ ಬಿ.ಇ.ಪ್ರದೀಪ್, ವಕೀಲರಾದ ಬಿಸ್ನಳ್ಳಿ ಜಯಣ್ಣ, ರವೀಂದ್ರ, ಸುರೇಶ್,ದಾಸಪ್ಪ, ಮೊಹಮದ್ ಇಮ್ರಾನ್, ಎನ್.ಹರೀಶ್, ಬಿ.ಎ.ರಾಜೀವ್, ಆರ್.ಧನಂಜಯ, ಅಶೋಕ್ ಬೆಳಗಟ್ಟ, ಎನ್.ಎಸ್.ವರುಣ, ಆರ್.ರವಿ, ಬಿ.ಎನ್.ರೂಪಾ ದೇವಿ, ಪಿ.ಶೀಲಾ, ನೂರುಲ್ಲಾ ಹಸನ್, ನಜೀಬುಲ್ಲಾ, ಪ್ರಕಾಶ್, ಶಿವಣ್ಣರೆಡ್ಡಿ, ತಿಪ್ಪೇಸ್ವಾಮಿ, ಸಾವಿತ್ರಿ, ಮುಬಿನಾಬೇಗಂ, ಮಂಜುಳಾ, ಪವಿತ್ರಾ, ಉಷಾ ಇದ್ದರು.

------------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net