ಹಲ್ಲು ಶುಚಿತ್ವದಿಂದ ಆರೋಗ್ಯ ಉತ್ತಮ

nrp health
ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಂತ ತಪಾಸಣಾ ಶಿಬಿರವನ್ನು ಡಾ. ಶ್ರೀನಿವಾಸ್ ಉದ್ಘಾಟಿಸಿದರು. ವಿಶಾಂತಿ ಡಿಸೋಜಾ, ವಿಜಯಕುಮಾರ್, ಡಾ. ಚೇತನ್, ಡಾ. ವಿನಯ್ ಇತರರಿದ್ದರು.
Published on

ಎನ್.ಆರ್.ಪುರ: ದಂತ ಭಾಗ್ಯ ಯೋಜನೆ ವೃದ್ಧರಿಗೆ ಆಶಾಕಿರಣ ಎಂದು ಸರ್ಕಾರಿ ಆಸ್ಪತ್ರೆ ದಂತ ವೈದ್ಯ ಶ್ರೀನಿವಾಸ್ ಹೇಳಿದರು.

ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ಇಲಾಖೆಯಿಂದ ನಡೆದ ಉಚಿತ ದಂತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಪ್ರಯುಕ್ತ ಉಚಿತ ದಂತ ತಪಾಸಣಾ ಶಿಬಿರ ಹಾಗೂ ದಂತ ಭಾಗ್ಯ ಯೋಜನೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ದಂತ ಆರೋಗ್ಯದ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಸುಬ್ಬಯ್ಯ ದಂತ ಮಹಾವಿದ್ಯಾಲಯದ ಎಚ್‌ಒಡಿ ಡಾ. ಚೇತನ್ ಮಾತನಾಡಿ, ತಂಬಾಕು ಬಳಕೆ, ಧೂಮಪಾನ ಮಾಡುವುದರಿಂದ ದಂತದ ಆರೋಗ್ಯ ಹಾಳಾಗುವುದರ ಜತೆಗೆ ಕ್ಯಾನ್ಸರ್ ಬರುವ ಸಂಭವವಿರುತ್ತದೆ ಎಂದು ತಿಳಿಸಿದರು.

ಕಟ್ಟಿಮನೆ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಮಾತನಾಡಿ, ಹಲ್ಲುಗಳು ಮನುಷ್ಯನ ಸೌಂದರ್ಯ ಹೆಚ್ಚಿಸುತ್ತವೆ. ಆದ್ದರಿಂದ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

102 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. 12 ಜನ ದಂತ ಭಾಗ್ಯ ಯೋಜನೆಯ ಲಾನುಭವಿಗಳನ್ನಾಗಿ ಆಯ್ಕೆ ಮಾಡಿ ಮುಂದಿನ ಚಿಕಿತ್ಸೆಗಾಗಿ ಸುಬ್ಬಯ್ಯ ದಂತ ಮಹಾವಿದ್ಯಾಲಯಕ್ಕೆ ಕಳಿಸಲಾಯಿತು.

ಕಾನೂರು ಗ್ರಾಪಂ ಸದಸ್ಯೆ ವಿಶಾಂತಿ ಡಿಸೋಜಾ, ಸದಸ್ಯ ವಿಜಯಕುಮಾರ್, ಪಿ.ಪಿ.ಬೇಬಿ, ಆಶಾಕಾರ್ಯರ್ತೆಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net