

ಹುಬ್ಬಳ್ಳಿ : ಹಿಂದು ಸಮಾಜದವರು ಹಲಾಲ್ ಮುಕ್ತ ದೀಪಾವಳಿ ಆಚರಿಸಬೇಕು ಹಾಗೂ ಹಲಾಲ್ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾರಾಟಗೊಳ್ಳುವ ಬಹುತೇಕ ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ಪಡೆದುಕೊಳ್ಳುವುದು ಹೆಚ್ಚಾಗಿದೆ. ದಿನಬಳಕೆ ವಸ್ತುಗಳು, ಔಷಧಿ, ತುಳಸಿ ಉತ್ಪನ್ನಗಳು, ಹಪ್ಪಳ ಸೇರಿದಂತೆ ಬಹುತೇಕ ಉತ್ಪನ್ನಗಳು ಹಲಾಲ್ ಪ್ರಮಾಣಪತ್ರ ಪಡೆದುಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಜಮಾತ್ ಉಲೆಮಾ ಹಿಂದ್ ಹಲಾಲ್ ಟ್ರಸ್ಟ್ ಎಂಬ ಸಂಸ್ಥೆ ಈ ಹಲಾಲ್ ಪ್ರಮಾಣ ಪತ್ರ ನೀಡುತ್ತಿದೆ. ಇದಕ್ಕೆ ಸರ್ಕಾರದ ಪರವಾನಿಗೆ ಇಲ್ಲ. ಆದರೆ, ಹಲಾಲ್ ಪ್ರಮಾಣ ಪತ್ರ ಇರಬೇಕೆಂಬ ಕಲ್ಪನೆಯನ್ನು ಜನಸಾಮಾನ್ಯರಲ್ಲಿ ಬಿತ್ತಲಾಗಿದೆ. ಹೀಗಾಗಿ, ಸಾರ್ವಜನಿಕರು ಸಹ ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಹಲಾಲ್ ಪ್ರಮಾಣ ಪತ್ರ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.
ಹಲಾಲ್ ಪ್ರಮಾಣ ಪತ್ರ ಪಡೆದುಕೊಳ್ಳಲು ಒಂದೊಂದು ಉತ್ಪನ್ನಕ್ಕೆ ಕನಿಷ್ಠ 50 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರಮಾಣ ಪತ್ರ ನೀಡಲು ಪಡೆದ ಶುಲ್ಕವನ್ನು ಉಗ್ರಗಾಮಿ ಸಂಟನೆಗಳಿಗೆ ಪ್ರೋತ್ಸಾಹ ನೀಡಲು ಬಳಸಲಾಗುತ್ತಿದೆ. ಪಿಎ್ಐ ಸಂಟನೆಗೂ ಇದೇ ಟ್ರಸ್ಟ್ನಿಂದ ಹಣ ಹೋಗುತ್ತದೆ. ಉಗ್ರಗಾಮಿ ಚಟುವಟಿಕೆಗಳು, ಗಲಭೆಗಳು, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆಗಳಿಗೆ ಇದೇ ಹಣ ಬಳಕೆಯಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ತಕ್ಷಣ ಜಮಾತ್ ಉಲಮಾ ಹಿಂದ್ ಹಲಾಲ್ ಟ್ರಸ್ಟ್ ಅನ್ನು ಹಾಗೂ ಅದು ನೀಡುವ ಪ್ರಮಾಣ ಪತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಹಲಾಲ್ ಪ್ರಮಾಣ ಪತ್ರದ ವಿರುದ್ಧ ಜಾಗೃತಿ ಮೂಡಿಸಲು ಕರಪತ್ರ ಹಂಚಲಾಗುವುದು. ಬ್ಯಾನರ್ಗಳನ್ನು ಕಟ್ಟಲಾಗುವುದು. ಹಿಂದುಗಳು ಸಹ ದೀಪಾವಳಿ ಸಂದರ್ಭದಲ್ಲಿ ಹಿಂದುಗಳ ಬಳಿಯೇ ಸಲಕರಣೆಗಳನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.
ಕಳೆದ 70 ವರ್ಷಗಳಿಂದ ಮತಬ್ಯಾಂಕ್ಗಾಗಿ ಕಾಂಗ್ರೆಸ್ ಹಲಾಲ್ಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಮುಂದಿನ ಒಂದು ವರ್ಷದಲ್ಲಿ ಭಾರತವನ್ನು ಹಲಾಲ್ ಮುಕ್ತವನ್ನಾಗಿಸಲಾಗುವುದು. ಹಲಾಲ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಂದೋಲನ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟಿಸಲಾಗುವುದು ಎಂದರು.
ಶ್ರೀರಾಮಸೇನೆ ರಾಜ್ಯ ಕಾರ್ಯದಶಿರ್ ಗಂಗಾಧರ ಕುಲಕಣಿರ್, ಹಿಂದು ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ, ಗುರುಪ್ರಸಾದ ಗೌಡ, ಹನುಮಂತಸಾ ನಿರಂಜನ, ರೂಪಾ ದೌಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.