ಹಲಾಲ್ ರದ್ದುಪಡಿಸಿ, ಲವ್ ಜಿಹಾದ್ ನಿಷೇಧಿಸಿ

17Kush04
Published on

ಕುಶಾಲನಗರ: ರಾಜ್ಯ ಸರ್ಕಾರವು ಹಲಾಲ್ ಸರ್ಟಿಫಿಕೇಟ್ ರದ್ದುಪಡಿಸಬೇಕು, ಲವ್ ಜಿಹಾದ್ ನಿಷೇಧಿಸಬೇಕೆಂದು ಹಿಂದು ಜನಜಾಗೃತಿ ಸಮಿತಿಯ ದಕ್ಷಿಣ ಭಾರತದ ವಕ್ತಾರ ಚಂದ್ರು ಮೊಗೇರ್ ಆಗ್ರಹಿಸಿದರು.


ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಶನಿವಾರ ಹಿಂದು ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಲಾಲ್ ಗುಣಮಟ್ಟವನ್ನು ಕೆಲವು ಖಾಸಗಿ ಸಂಸ್ಥೆಗಳು ಪರಿಶೀಲನೆ ನಡೆಸದೆ ಸರ್ಟಿಫಿಕೇಟ್ ನೀಡುತ್ತಿರುವುದು ಸರಿಯಲ್ಲ. ಪ್ರತಿ ವರ್ಷ 55 ರಿಂದ 60 ಸಾವಿರ ರೂ. ಹಣವನ್ನು ಈ ಸಂಸ್ಥೆಗೆ ನೀಡಬೇಕಾಗಿದೆ ಎಂದರು.
ಇಸ್ಲಾಂ ಸಂಘಟನೆಗಳಿಂದ ಭಾರತದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧಿಸಿ, ಹಲಾಲ್ ಸರ್ಟಿಫಿಕೇಟ್ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.


ಕೊಡಗು ಜಿಲ್ಲಾ ಸಮನ್ವಯಕ ಮೃತ್ಯುಂಜಯ, ಶ್ರೀಲಕ್ಷ್ಮೀ, ಕುಶಾಲನಗರ ಕೇಂದ್ರದ ಸಮನ್ವಯಕ ಶ್ರೀನಾಥ್, ಡಾ. ವಿನಯ್, ವಿ.ಪಿ.ಮುರಳಿ, ಕೆ.ಎಸ್. ರಾಜಶೇಖರ್, ಬಿ.ಎಂ.ರವಿಚಂದ್ರ, ಉಮೇಶ್, ಪ್ರಸನ್ನ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net