

ಗೋಣಿಕೊಪ್ಪ: ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ವತಿಯಿಂದ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮ, ಸಾರ್ವಜನಿಕರು ಮತ್ತು ಶಿಬಿರಾರ್ಥಿಗಳ ರುಚಿ-ಸವಿರುಚಿ, ಅಡುಗೆ, ಸಹಭೋಜನಾ, ಗುಂಪು ಚಟುವಟಿಕೆ, ಆರೋಗ್ಯ ತಪಾಸಣೆ, ಗ್ರಾಮೀಣ ಕ್ರೀಡಾಕೂಟ, ರಸಪ್ರಶ್ನೆ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಸರ್ಗ ಯುವತಿ ಮಂಡಳಿಯಿಂದ ದೇಶಭಕ್ತಿ ಗೀತೆ, ನಾಟ್ಯ ಸಂಕಲ್ಪ ನೃತ್ಯ ಶಾಲೆಯಿಂದ ಭಾರತೀಯ ಸಂಸ್ಕೃತಿ ದಿನಾಚರಣೆ, ಕಾವೇರಿ ಕಲಾ ಸಿರಿ ತಂಡದಿಂದ ಚಲನಚಿತ್ರ ದಿನಾಚರಣೆ, ಶಿಬಿರಾರ್ಥಿಗಳು ಮತ್ತು ಹಿರಿಯ ಸ್ವಯಂ ಸೇವಕರಿಂದ ಹಾಸ್ಯ, ಮಂದತವ್ವ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡವ ದಿನಾಚರಣೆ ನಡೆಯಿತು. ಶಿಬಿರ ಜ್ಯೋತಿ, ಕೊಡವ ಆಟ್‌ಪಾಟ್ ಕಾರ್ಯಕ್ರಮ ಗಮನ ಸೆಳೆಯಿತು.
ಶ್ರೀನಿಧಿ, ರೀನಾ ಉತ್ತಮ ಶಿಬಿರಾರ್ಥಿ ಬಹುಮಾನ ಪಡೆದುಕೊಂಡರು. ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಅಚ್ಚಾಂಡೀರ ಪವನ್ ಪೆಮ್ಮಯ್ಯ, ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟೀರ ಕೆ.ಬಿದ್ದಪ್ಪ, ಮುಖ್ಯ ಶಿಕ್ಷಕಿ ಸಿ.ಎನ್.ಡೈನಿ, ಸಹ ಶಿಕ್ಷಕ ಕೆ.ಇ.ಶ್ರೀಕೃಷ್ಣ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಯೋಜನಾಧಿಕಾರಿ ಮಂದೇಯಂಡ ವನಿತ್‌ಕುಮಾರ್, ಮಚ್ಚಮಾಡ ರೀತಾ ಇದ್ದರು.