ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

9kglphoto-8
Published on

ಕೊಳ್ಳೇಗಾಲ: ನಗರೋತ್ಥಾನ 4ನೇ ಹಂತದ ಯೋಜನೆಯಡಿ 6.66 ಕೋಟಿ ರೂ. ವೆಚ್ಚದಲ್ಲಿ ಗುರುವಾರ ಪಟ್ಟಣದ ವಿವಿಧೆಡೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.
ಪಟ್ಟಣದ ಆರ್.ಎಂ.ಸಿ ಮುಂಭಾಗವಿರುವ ಡಿಎಫ್‌ಒ ಕಚೇರಿ ರಸ್ತೆ, ಶಿವಕುಮಾರ್ ಸ್ವಾಮಿ ಬಡಾವಣೆ, ಭೀಮನಗರ ಬಡಾವಣೆ ಹೆಬ್ಬಾಗಿಲು ಹಾಗೂ ಬಸ್ ನಿಲ್ದಾಣದ ಬಳಿ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
14ನೇ ಹಣಕಾಸಿನ ಯೋಜನೆಯಡಿ ಸುಮಾರು 39 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಅಚ್ಗಾಳ್ ಯಾತ್ರಿ ನಿವಾಸ್‌ನಿಂದ ಪಶು ಆಸ್ಪತ್ರೆವೆರಗಿನ ರಾಷ್ಟ್ರೀಯ ಹೆದ್ದಾರಿ(209)ಗೆ ವಿದ್ಯುತ್ ಕಂಬ ಹಾಗೂ ದೀಪ ಅಳವಡಿಕೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. 1.5 ಕೀ.ಮೀ ವ್ಯಾಪ್ತಿಯಲ್ಲಿ 59 ವಿದ್ಯುತ್ ಕಂಬಗಳು 118 ಲೈಟ್‌ಗಳನ್ನು ಅಳವಡಿಸಲಾಗುತ್ತದೆ.
ವರದಿ ಪರಿಣಾಮ: ಫೆ.2ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ‘ಕಗ್ಗತ್ತಲಲ್ಲಿ ಹೆದ್ದಾರಿ ರಸ್ತೆ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದೀಗ ಹೆದ್ದಾರಿಯಲ್ಲಿ ಲೈಟ್ ಅಳವಡಿಕೆ ಕಾಮಗಾರಿಗೆ ಚಾಲನೆ ದೊರೆತಿದೆ.
ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ ರೇಖಾ ಹಾಗೂ ಕಾಂಗ್ರೆಸ್ ಸದಸ್ಯರು ಗೈರಾಗಿದ್ದು ಚರ್ಚೆಗೆ ಗ್ರಾಸವಾಯಿತು.ನಗರಸಭೆ ಸದಸ್ಯ ಶಂಕನಪುರ ಪ್ರಕಾಶ್, ಪರಮೇಶ್ವರ್, ನಾಶೀರ್ ಷರೀಫ್, ಸುಮಾ ಸುಬ್ಬಣ್ಣ, ಶಿರಿಸಾ ಸತೀಸ್, ನಗರಸಭೆ ನಾಮ ನಿರ್ದೇಶಿತ ಸದಸ್ಯ ಜಿ.ಸೆಲ್ವರಾಜು, ಪೌರಯುಕ್ತ ನಂಜುಂಡಸ್ವಾಮಿ, ಎಇಇ ಸುರೇಶ್, ಇಂಜಿನಿಯರ್ ನಾಗೇಂದ್ರ, ಮುಖಂಡರಾದ ಪ್ರಭುಸ್ವಾಮಿ, ಜಕಾವುಲ್ಲಾ, ಜಗದೀಶ್ ಶಂಕನಪುರ, ಸೋಮಣ್ಣ ಉಪ್ಪಾರ್, ಮಹದೇವಸ್ವಾಮಿ, ಆಗಸ್ಟೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net