ಹಲವರಿಗೆ ಕೋಟ್ಯಂತರ ರೂ. ವಂಚಿಸಿದ ಭೂಪ

FotoJet (1)
Published on

ಸಾಲ ಪಡೆದು ಪರಾರಿಯಾದ ಮಂಡಿ ವ್ಯಾಪಾರಿ | ಬಾಗೇಪಲ್ಲಿ ಎಪಿಎಂಸಿ ಯಾರ್ಡ್‌ನಲ್ಲಿ ಸಂತ್ರಸ್ತರ ಪ್ರತಿಭಟನೆ

ಬಾಗೇಪಲ್ಲಿ : ಮೂವತ್ತೈದಕ್ಕೂ ಮಂದಿಯಿಂದ ಕೋಟ್ಯಂತರ ರೂ. ಸಾಲ ಪಡೆದು ತಲೆಮರೆಸಿಕೊಂಡಿರುವ ಮಂಡಿ ವ್ಯಾಪಾರಿ ಕುಟುಂಬ ಸದಸ್ಯರ ಭಾವಚಿತ್ರವುಳ್ಳ ್ಲೆಕ್ಸ್ ಪ್ರದರ್ಶಿಸಿ ಸಂತ್ರಸ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ತಮಟೆ ಚಳವಳಿ ನಡೆಸಿದರು.

ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಬಾಲಾಜಿ ಕೃಪೆ ಟ್ರೇಡರ್ಸ್‌ ಮಂಡಿ ವ್ಯಾಪಾರಿ ಬಿ.ವಿ.ಶ್ರೀನಿವಾಸ್ ಹಾಗೂ ಮಕ್ಕಳಾದ ಜನಾರ್ದನ, ಸುರೇಂದ್ರ ಭಾವಚಿತ್ರಗಳು ಹಾಗೂ ಸಾಲ ಪಡೆದಿದ್ದಕ್ಕೆ ನೀಡಿರುವ ಚೆಕ್‌ಗಳನ್ನು ಮುದ್ರಿಸಿದ ್ಲೆಕ್ಸ್‌ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಂತ್ರಸ್ತರು ಎಪಿಎಂಸಿ ಕಾರ್ಯದರ್ಶಿ ಕಚೇರಿ ಎದುರು ಸಮಾವೇಶಗೊಂಡು ವಂಚಕನ ಮಂಡಿಗೆ ನೀಡಿರುವ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಎಸ್‌ಐ ಹನುಮಂತರಾಯಪ್ಪ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಪುರಸಭೆ ಸದಸ್ಯ ಗಡ್ಡಂ ರಮೇಶ್ ಮಾತನಾಡಿ, ಪಟ್ಟಣದ 40ಕ್ಕೂ ಹೆಚ್ಚು ಮಂದಿಯಿಂದ ಮಂಡಿ ವ್ಯಾಪಾರಿ ಬಿ.ವಿ. ಶ್ರೀನಿವಾಸ್ ಹಾಗೂ ಆತನ ಇಬ್ಬರು ಮಕ್ಕಳು ಸೇರಿ ಅಂದಾಜು 1.5 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಸಾಲ ಪಡೆದಿದ್ದಾರೆ. ಈ ಬಗ್ಗೆ ಹಣ ಹಿಂತಿರುಗಿಸುವಂತೆ ಶ್ರೀನಿವಾಸ್ ಅವರನ್ನು ಕೇಳಿದರೆ, ಚೆಕ್ ನಾನು ಕೊಟ್ಟಿಲ್ಲ. ನನ್ನ ಮಗ ಸುರೇಂದ್ರ ಚೆಕ್ ಕೊಟ್ಟು ಹಣ ಪಡೆದುಕೊಂಡಿದ್ದಾನೆ. ಈಗ ಮನೆ ಬಿಟ್ಟು ಹೋಗಿದ್ದಾನೆ. ಮಗ ಮಾಡಿರುವ ಸಾಲಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಉಡಾೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಉಲ್ಟಾ ಹೊಡೆದ ವ್ಯಾಪಾರಿ

ಈ ಬಗ್ಗೆ ಎಸ್ಪಿ ಕಚೇರಿ ಹಾಗೂ ಬಾಗೇಪಲ್ಲಿ ಠಾಣೆಯಲ್ಲಿ ದೂರು ನೀಡಿದ್ದು, ಎರಡು ಕಡೆಯವರನ್ನು ಬಾಗೇಪಲ್ಲಿ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ 1 ತಿಂಗಳೊಳಗೆ ಸಾಲ ಹಿಂದಿರುಗಿಸುವುದಾಗಿ ಒಪ್ಪಿಕೊಂಡಿದ್ದ ಮಂಡಿ ಮಾಲೀಕ ಬಿ.ವಿ.ಶ್ರೀನಿವಾಸ್, ದಿನ ಕಳೆಯುತ್ತಿದಂತೆ ಸಾಲಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಉಲ್ಟಾ ಹೊಡೆದಿದ್ದಾನೆ. ಸಾಲ ಕೊಟ್ಟಿರುವ ತಪ್ಪಿಗೆ ನಾವುಗಳೇ ಠಾಣೆ ಹಾಗೂ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ನಿರ್ಮಲಾ ಎಂಬಾಕೆ ಮಾತನಾಡಿ, ಸೀ ಶಕ್ತಿ ಸಂಘಗಳಿಂದ ಸಾಲ ಪಡೆದುಕೊಂಡು ಸುರೇಂದ್ರ ಎಂಬವರಿಗೆ 3 ಲಕ್ಷ ರೂ. ಕೊಟ್ಟಿದ್ದೆ. ಜತೆಗೆ ಚಿನ್ನಾಭರಣವನ್ನೂ ಕೊಟ್ಟಿದ್ದೇನೆ. ಅವರಿಗೆ ಕೊಟ್ಟಿರುವ ಹಣಕ್ಕೆ ನಾನು ಬಡ್ಡಿ ಕಟ್ಟುತ್ತಿದ್ದೇನೆ. ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುವ ನಮಗೆ ಮೋಸ ಮಾಡಿದ್ದಾರೆ. ಶ್ರೀನಿವಾಸ್ ಹಾಗೂ ಮಗ ಸುರೇಂದ್ರ ಅವರಿಂದ ಹಣ ವಸೂಲಿ ಮಾಡಿಸಿಕೊಡಬೇಕು ಎಂದು ದೂರು ಸಲ್ಲಿಸಿದ್ದೇನೆ. ಹಣ ವಾಪಸ್ ನೀಡದ ಕಾರಣ ಬೇಸತ್ತು ಹೋರಾಟದ ಹಾದಿ ಹಿಡಿದಿದ್ದೇನೆ ಎಂದರು. ಸಂತ್ರಸ್ತರಾದ ಮುರಳಿ, ವಿನೋದ, ಭರತ್, ನಾರಾಯಣನಾಯಕ್, ಈಶ್ವರಮ್ಮ, ಅನಿಲ್, ಗಂಗ, ಮುನಿರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net