

ಭಾಲ್ಕಿ: ತಾಲೂಕಿನ ಹಲಬರ್ಗಾ ಗ್ರಾಮದ ಶ್ರೀ ಗುರು ರಾಚೋಟೇಶ್ವರ ವಿರಕ್ತ ಮಠದಲ್ಲಿ 12 ದಿನ ಅರ್ಥಪೂರ್ಣವಾಗಿ ನಡೆಯುವ ಶ್ರೀ ಸಿದ್ಧರಾಮೇಶ್ವರ ನಮ್ಮೂರ ಜಾತ್ರಾ ಮಹೋತ್ಸವಕ್ಕೆ ಜ.1ರಂದು ಚಾಲನೆ ಸಿಗಲಿದೆ.
ಪ್ರಸಕ್ತ 8ನೇ ವರ್ಷದ ಜಾತ್ರೋತ್ಸವಿದೆ. ಕರೊನಾದ ನಡುವೆಯೂ ಸ್ಥಳೀಯರು ಶೃದ್ಧೆ, ಭಕ್ತಿಯಿಂದ ಜಾತ್ರೆಯನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. ರಾಚೋಟೇಶ್ವರ ಸಂಸ್ಥಾನದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಜ.1ರಂದು ಬೆಳಗ್ಗೆ 10.30ಕ್ಕೆ ಶ್ರೀಶೈಲ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಪುರ ಪ್ರವೇಶ ನಡೆಯಲಿದೆ. ಪೂಜ್ಯರಿಗೆ ಅದ್ದೂರಿ ಸ್ವಾಗತ ನೀಡಿ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು. ನಂತರ ಧರ್ಮ ಸಭೆ ಜರುಗಲಿದೆ. ಭಕ್ತಾದಿಗಳು ಕರೊನಾ ಮಾರ್ಗಸೂಚಿ ಪಾಲಿಸುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸದ್ಭಕ್ತ ಮಂಡಳಿ ಕೋರಿದೆ.