ಹಲಗೂರಿನಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ

PUNITH PUNAYATHITI
Published on

ಹಲಗೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಡಾ.ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಹಲಗೂರಿನ ಲಯನ್ಸ್ ಕ್ಲಬ್, ಒಕ್ಕಲಿಗರ ಸಂಘ, ಗ್ರಂಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆಂಪೇಗೌಡ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 284 ಜನರನ್ನು ಪರೀಕ್ಷಿಸಿ 80 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. 130 ಜನರಿಗೆ ದಂತ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಯಿತು. 311 ಜನರಿಗೆ ಮಧುಮೇಹ ಹಾಗೂ ರಕ್ತದ ಒತ್ತಡ ಪರೀಕ್ಷೆ ಮಾಡಲಾಯಿತು. ವೈದ್ಯಾಧಿಕಾರಿ ಅಕ್ಷಯ್ ಮತ್ತು ತಂಡ ರೋಗಿಗಳ ತಪಾಸಣೆ ನಡೆಸಿತು.ಹಲಗೂರು ಲಯನ್ಸ್ ಕ್ಲಬ್ ಅಧ್ಯಕ್ಷ ಅಶ್ವತ್ಥ್ ನಾರಾಯಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಕಾರ್ಯದರ್ಶಿ ಎಸ್.ಗುರುಸಿದ್ದು, ಖಜಾಂಜಿ ಬಿ.ಸಿ.ಬಸವರಾಜು ಹಾಗೂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net