ಹಲಗಾ ಗ್ರಾಮಕ್ಕೆ ಸ್ವತಂತ್ರ ಬಸ್ ಆಗಮನ

Published on

ಬೆಳಗಾವಿ: ಸುವರ್ಣ ವಿಧಾನ ಸೌಧದಂತಹ ಮಹತ್ವದ ಆಡಳಿತ ಕೇಂದ್ರವಿದ್ದರೂ ಇಲ್ಲಿಯವರೆಗೆ ಸ್ವತಂತ್ರ ಬಸ್ ಹೊಂದಿರದ ತಾಲೂಕಿನ ಹಲಗಾ ಗ್ರಾಮಕ್ಕೆ ‌ಕೊನೆಗೂ ಸ್ವತಂತ್ರ ಬಸ್ ಆರಂಭಗೊಂಡಿದೆ.
ಬೆಳಗಾವಿ ನಗರಕ್ಕೆ ಸಮೀಪದಲ್ಲೇ ಪ್ರಮುಖ ರಸ್ತೆಯಲ್ಲಿಯೇ ಹಲಗಾ ಗ್ರಾಮ ಇರುವುದರಿಂದ ಈ ಮಾರ್ಗದಲ್ಲಿ ಸಾಕಷ್ಟು ಬಸ್ ಓಡಾಡುತ್ತವೆ ಎಂದು ಗ್ರಾಮಕ್ಕೆ ಪ್ರತ್ಯೇಕ ಬಸ್ ಇರಲಿಲ್ಲ. ಆದರೆ ಬೇರೆ ಊರುಗಳಿಂದ ಬರುವ ಬಸ್‌ಗಳಲ್ಲಿ ಜಾಗವಿಲ್ಲದೇ, ಗ್ರಾಮಸ್ಥರು, ವಿದ್ಯಾರ್ಥಿಗಳು ಪರದಾಡುವ ಸ್ಥಿತಿ‌ ಇತ್ತು. ಹೀಗಾಗಿ ತಮ್ಮ ಗ್ರಾಮಕ್ಕೆ ಪ್ರತ್ಯೇಕ ಬಸ್ ಕಾರ್ಯಾಚರಣೆ ಮಾಡುವಂತೆ ವಿದ್ಯಾರ್ಥಿಗಳು ಹೋರಾಟ ಸಹ ಮಾಡಿದ್ದರು.
ಕೊನೆಗೂ ಸೋಮವಾರ ಗ್ರಾಮಕ್ಕೆ ಸ್ವತಂತ್ರ ಬಸ್ ಬಂದಿದ್ದು,
ಮೊದಲ ಸಲ ಗ್ರಾಮಕ್ಕೆ ಬಂದ ನೂತನ ಬಸ್ಸನ್ನು ಗ್ರಾಮಸ್ಥರು ಪೂಜಿಸಿ, ಸಂಭ್ರಮಾಚರಣೆ ಮಾಡಿದರು. ಬಸ್ಸಿನ ಚಾಲಕ ಮತ್ತು ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಹಲಗಾ ಗ್ರಾಮಕ್ಕೆ ಆಗಮಿಸಿದ ನೂತನ ಬಸ್ಸನ್ನು ಗ್ರಾಮಸ್ಥರು ಸ್ವಾಗತಿಸಿಕೊಂಡರು.
ಹಲಗಾ ಗ್ರಾಮಕ್ಕೆ ಆಗಮಿಸಿದ ನೂತನ ಬಸ್ಸನ್ನು ಗ್ರಾಮಸ್ಥರು ಸ್ವಾಗತಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net