ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

04BTP01
ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಹಮತ್ತೂಲ್ಲ ಮತ್ತು ಉಪಾಧ್ಯಕ್ಷ ಅಣ್ಣಯ್ಯ ಅವರನ್ನು ನಿರ್ದೇಶಕರು ಮತ್ತು ಮುಖಂಡರು ಅಭಿನಂದಿಸಿದರು. ಸೈಯದ್ ಹಾಫೀಜ್, ಪಯಾಜ್ ಪಾಷ, ಅನ್ವರ್ ಅಹ್ಮದ್, ಶೇಕ್ ಯೂನಸ್, ನೂರುಲ್ಲ ಷರೀಫ್, ಜಾವೀದ್ ಪಾಷ, ಫರ್ಜನಾ ಭಾನು, ಲಲಿತಮ್ಮ, ಉಬೇದುಲ್ಲಾ, ದೇವರಾಜು ಇದ್ದರು.
Published on

ಬೆಟ್ಟದಪುರ: ಸಮೀಪದ ಹಲಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ರಹಮತ್ತೂಲ್ಲ ಹಾಗೂ ಉಪಾಧ್ಯಕ್ಷರಾಗಿ ಅಣ್ಣಯ್ಯ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ಸಂಘದ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಪಿ.ಪ್ರಸಾದ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ನಿರ್ದೇಶಕರಾದ ಸೈಯದ್ ಹಾಫೀಜ್, ಪಯಾಜ್ ಪಾಷ, ಅನ್ವರ್ ಅಹ್ಮದ್, ಶೇಕ್ ಯೂನಸ್, ನುರುಲ್ಲಾ ಷರೀಫ್, ಜಾವೀದ್ ಪಾಷ, ಫರ್ಜನಾ ಭಾನು, ಲಲಿತಮ್ಮ, ಉಬೇದುಲ್ಲಾ, ದೇವರಾಜು, ಗ್ರಾಪಂ ಉಪಾಧ್ಯಕ್ಷ ಸಫೀರ್ ಅಹಮ್ಮದ್, ಡೈರಿ ಮಾಜಿ ಅಧ್ಯಕ್ಷ ಶಫೀಕ್ ಅಹಮ್ಮದ್, ಸಂಘದ ಕಾರ್ಯದರ್ಶಿ ಸೈಯದ್ ಮುಜಾಹಿದ್, ಮುಖಂಡರಾದ ಅತ್ತರ್ ಮತ್ತೀನ್, ಇದ್ರೀಶ್, ಮುನಿಸೀಫ್, ಸೈಯದ್ ಅತ್ತಾಯರ್, ರಿಯಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net