ಹರ್ಷ ಕೊಲೆ ಹಿಂದಿದೆ ವ್ಯವಸ್ಥಿತ ಸಂಚು

Capture1
Published on

ಹುಮನಾಬಾದ್: ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಪಟ್ಟಣದಲ್ಲಿ ಬುಧವಾರ ಹಿಂದುಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು. ಬೆಳಗ್ಗೆಯಿಂದ ಮುಖ್ಯ ಮಾರುಕಟ್ಟೆಯಲ್ಲಿ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಬೆಂಬಲ ಸೂಚಿಸಿದರು.

ಬಸವೇಶ್ವರ ವೃತ್ತದಿಂದ ಬಾಲಜಿ, ಸದರ್ಾರ್ ಪಟೇಲ್ ವೃತ್ತದ ಮೂಲಕ ಡಾ.ಅಂಬೇಡ್ಕರ್ ವೃತ್ತದವರೆಗೆ ನಡೆದ ಮೆರವಣಿಗೆಯುದ್ದಕ್ಕೂ ಕೇಸರಿ ಶಾಲು ರಾರಾಜಿಸಿದವು. ಹಂತಕರ ವಿರುದ್ಧ ಘೋಷಣೆಗಳು ಮೊಳಗಿದವು.

ಸ್ಥಳೀಯ ಹಿರೇಮಠದ ಶ್ರೀ ರೇಣುಕಗಂಗಾಧರ ಶಿವಾಚಾರ್ಯರು, ಹಳ್ಳಿಖೇಡ(ಕೆ) ಹಿರೇಮಠದ ಶ್ರೀ ಸಿದ್ಧರಾಮ ಸ್ವಾಮೀಜಿ, ಬಿಜೆಪಿ ಮುಖಂಡರಾದ ಡಾ.ಸಿದ್ದು ಪಾಟೀಲ್, ಸೋಮನಾಥ ಪಾಟೀಲ್, ಜೆಡಿಎಸ್ ಮುಖಂಡ ಮಹೇಶ ಅಗಡಿ, ಯುವ ಬ್ರಿಗೇಡ್ನ ಲಕ್ಷ್ಮೀಕಾಂತ ಹಿಂದೊಡ್ಡಿ, ಸಂಘಟನೆಗಳ ಪ್ರಮುಖರಾದ ಮಹಾದೇವ ಗೌಳಿ, ಜ್ಯೋತಿಬಾ ಸಾಠೆ, ಗೋಪಿ ಮುಳೆ, ದಿನೇಶರಡ್ಡಿ ಮಾತನಾಡಿ, ಹರ್ಷ ಹತ್ಯೆ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ. ಹಿಂದು ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ಕೊಲೆ ಮಾಡುತ್ತ ಆತಂಕ ಸೃಷ್ಟಿಸಲಾಗುತ್ತಿದೆ. ಇದಕ್ಕೆಲ್ಲ ಹಿಂದುಗಳು ಹೆದರುವುದಿಲ್ಲ. ತಕ್ಕಪಾಠ ಕಲಿಸುತ್ತೇವೆ ಎಂದು ಗುಡುಗಿದರು.

ಹಂತಕರ ವಿರುದ್ಧ ಭಯೋತ್ಪಾನೆಯಡಿ ಪ್ರಕರಣ ದಾಖಲಿಸಬೇಕು. ಪ್ರಕರಣದ ತನಿಖೆಯನ್ನು ಎನ್ಐಎ ಅಥವಾ ಸಿಬಿಐಗೆ ಒಪ್ಪಿಸಿ ಸಂಚು ಬಯಲಿಗೆಳೆಯಬೇಕು. ದೇಶದ್ರೋಹಿ ಸಂಘಟನೆಗಳಾದ ಪಿಎಫ್ಐ ಮತ್ತು ಎಸ್ಡಿಪಿಐಗಳನ್ನು ರಾಜ್ಯ ಸಕರ್ಾರ ಕೂಡಲೇ ನಿಷೇಧಿಸಬೇಕು. ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಪ್ರಮುಖರಾದ ವಿನಾಯಕ ಮಂಡಾ, ಸುನೀಲ ಪಾಟೀಲ್, ವೀರೇಶ ಸೀಗಿ, ಸಿದ್ದು ಸ್ವಾಮಿ, ಸುನೀಲ ಪತ್ರಿ, ಸಚಿನ್ ಮಠಪತಿ, ಗಿರೀಶ ತುಂಬಾ, ಸಂಜೀವರೆಡ್ಡಿ, ಶ್ರೀನಾಥ ದೇವಣಿ, ಸಿದ್ದು ಚಕಪಳ್ಳಿ, ನವಿನ್ ಬತಲಿ, ಸಂಜು ಬತಲಿ, ಶಹಾಜಿ ಪಾಟೀಲ್, ಮಲ್ಲಿಕಾರ್ಜುನ ಕುಂಬಾರ, ಮಧುಕರ ಹಿಲಾಲಪುರ, ಪೀರಪ್ಪ, ನಾಗಭೂಷಣ ಸಂಗಮಕರ್, ರಾಜು ಉಪಾರ, ಗುಂಡುರೆಡ್ಡಿ ಇತರರಿದ್ದರು. ಗೃಹಮಂತ್ರಿಗೆ ಬರೆದ ಮನವಿಪತ್ರವನ್ನು ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ಶಿವಕುಮಾರ ಸ್ವಾಮಿ ಅವರಿಗೆ ಸಲ್ಲಿಸಲಾಯಿತು.

ಡಿವೈಎಸ್ಪಿ ಸೋಮನಾಥ ಕುಂಬಾರ ನೇತೃತ್ವದಲ್ಲಿ ಸಿಪಿಐಗಳಾದ ಮಲ್ಲಿಕಾಜರ್ುನ ಯಾತನೂರ, ಅಮೂಲ್ ಕಾಳೆ, ಪಿಎಸ್ಐಗಳಾದ ರವಿಕುಮಾರ ಹಿರೇಮಠ, ಬಸವರಾಜ ಬಿಗಿ ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net