ದಿಢೀರ್ ಸಾವರ್ಕರ್ ವೃತ್ತ ನಿರ್ಮಾಣ

Veer-Savarkar-Jayanti-2020
Published on

ಗದಗ: ತಾಲೂಕಿನ ಹರ್ತಿ ಗ್ರಾಮದ ವೃತ್ತಕ್ಕೆ ಶುಕ್ರವಾರ ರಾತ್ರಿ ದಿಢೀರ್​ಆಗಿ ‘ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್’ ಸರ್ಕಲ್ ಎಂದು ನಾಮಕರಣ ಮಾಡಿ ಸಾವರ್ಕರ್ ಭಾವಚಿತ್ರ ಇಡಲಾಗಿದೆ.
ಭಗತ್ ಸಿಂಗ್ ಅಭಿಮಾನಿ ಬಳಗದವರು ಈ ವೃತ್ತಕ್ಕೆ ವೀರ ಸಾವರ್ಕರ್ ಅವರ ಹೆಸರಿಡುವಂತೆ ನಾಲ್ಕು ದಿನಗಳ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದ್ದರು. ಇದೀಗ ರಾತ್ರೋರಾತ್ರಿ ವೃತ್ತಕ್ಕೆ ಸಾವರ್ಕರ್ ಸಕರ್ಲ್ ನಾಮಕರಣ ಮಾಡಿದ್ದಾರೆ. ಪಿಡಿಒ ಶಿವಲೀಲಾ ಅಂಗಡಿ ಅವರು ನಾಮಫಲಕ ತೆವುಗೊಳಿಸವಂತೆ ಸೂಚಿಸಿದ್ದಾರೆ. ಆದರೆ, ಅದಕ್ಕೆ ಒಪ್ಪದ ಅಭಿಮಾನಿ ಬಳಗದವರು ಯಾವುದೇ ಕಾರಣಕ್ಕೂ ಸರ್ಕಲ್ ತೆರವುಗೊಳಿಸುವುದಿಲ್ಲ ಎಂದು ಪಟ್ಟುಹಿಡಿದರು. ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ವೃತ್ತಕ್ಕೆ ಹೆಸರು ನಾಮಕರಣ ಮಾಡುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು, ಈ ಕುರಿತು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಪಿಡಿಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net