

ಚಿಕ್ಕಮಗಳೂರು: ನಾ.ಸು.ಹರ್ಡೀಕರ್ ದೇಶಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಡುವ ಜತೆಗೆ ಸ್ವಾತಂತ್ರö್ಯ ಹೋರಾಟಕ್ಕೆ ಯುವಕ-ಯುವತಿಯರನ್ನು ಪ್ರೇರೇಪಿಸಿದವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ತಿಳಿಸಿದರು.
ನಗರದ ಜಿಲ್ಲಾ ಸೇವಾದಳ ಕಚೇರಿಯಲ್ಲಿ ಭಾರತ ಸೇವಾದಳದ ಸಂಸ್ಥಾಪಕ ಡಾ. ನಾ.ಸು.ಹರ್ಡೀಕರ್ ಅವರ ೫೦ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಾಲ್ಯದಿಂದಲೂ ದೇಶಪ್ರೇಮ, ತ್ಯಾಗಗಳಂತಹ ಗುಣಗಳನ್ನು ಮೈಗೂಡಿಸಿಕೊಂಡಿದ್ದ ನಾ.ಸು.ಹರ್ಡೀಕರ್ ಅವರು ಭಾರತದ ಸೇವಾದಳವನ್ನು ಕಟ್ಟಿ ಯುವಶಕ್ತಿಯನ್ನು ಜಾಗೃತಿಗೊಳಿಸಿದ್ದಲ್ಲದೆ ದೇಶಕ್ಕಾಗಿ ಹೋರಾಡುವಂಥ ಸದ್ಗುಣಗಳನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಹರ್ಡೀಕರ್ ಅವರ ತತ್ವ, ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಿದ್ದಲ್ಲಿ ಭಾರತವು ಜಗತ್ತಿನಲ್ಲಿ ಮತ್ತಷ್ಟು ಎತ್ತರಕ್ಕೆ ನಿಲ್ಲಲು ಸಾಧ್ಯವಾಗುತ್ತದೆ. ನಾವೆಲ್ಲರೂ ಅವರ ಧ್ಯೇಯೋz್ದೆÃಶ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಜನ್ಮದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದರು.
ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಐ.ಬಿ.ಶಂಕರ್ ಮಾತನಾಡಿ, ಹರ್ಡೀಕರ್ ಅವರ ಸೇವಾದಳವು ದೇಶಕ್ಕೆ ಸ್ವಾತಂತ್ರö್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅವರ ಶಿಸ್ತು, ಸೇವಾ ಮನೋಭಾವ ಹಾಗೂ ತ್ಯಾಗ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ. ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಾಲಾಕ್ಷಮೂರ್ತಿ, ತಾಲೂಕು ದೈಹಿಕ ಪರಿವೀಕ್ಷಕ ಮಹೇಶ್, ತಾಲೂಕು ಅಧ್ಯಕ್ಷ ಜಿ.ಶಂಕರ್, ಕಾರ್ಯದರ್ಶಿ ಮಹೇಶಪ್ಪ, ಶಿಕ್ಷಣ ಇಲಾಖೆಯ ಇಸಿಒಗಳಾದ ಲೋಕೇಶ್ವರಾಚಾರ್ ಹಾಗೂ ಕುಮಾರಸ್ವಾಮಿ, ಸಂಘಟಕರಾದ ಚಂದ್ರಕಾA ತ್ ಮತ್ತಿತರರು ಉಪಸ್ಥಿತರಿದ್ದರು.