ಹರ್ಡಿಕರ್‌ರ ಶಿಸ್ತು ಜೀವನದಲ್ಲಿ ಅಳವಡಿಸಿಕೊಳ್ಳಿ

26-08-Shiva-4
ರಾಯಚೂರಿನ ಮುನ್ನೂರುವಾಡಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಎನ್.ಎಸ್.ಹರ್ಡಿಕರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾರತ ಸೇವಾದಗಳ ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪಗೌಡ ಕ್ಯಾದಿಗ್ಗೇರಿ ಮಾತನಾಡಿದರು. ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ, ವಿಭಾಗೀಯ ಸಂಘಟಕ ವಿದ್ಯಾಸಾಗರ್ ಚಿನಮಗೇರಿ, ಮುಖ್ಯಗುರು ಶಿವಕುಮಾರ ಇದ್ದರು.
Published on

ರಾಯಚೂರ: ಹಿಂದಿನ ಕಾಲದಲ್ಲಿಯೇ ವೈದ್ಯಕೀಯ ಪದವಿ ಪಡೆದು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಡಾ.ಎನ್.ಎಸ್.ಹರ್ಡಿಕರ್‌ರ ಶಿಸ್ತನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪಗೌಡ ಕ್ಯಾದಿಗ್ಗೇರಿ ಹೇಳಿದರು.
ಸ್ಥಳೀಯ ಮುನ್ನೂರುವಾಡಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹರ್ಡಿಕರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹರ್ಡಿಕರ್‌ರ ಜೀವನ, ಆದರ್ಶ ಇಂದಿಗೂ ಪ್ರಸ್ತುತವಾಗಿವೆ ಎಂದರು.
ಶಾಲೆ ಮುಖ್ಯಗುರು ಶಿವಕುಮಾರ ಮಾತನಾಡಿ, ಹರ್ಡಿಕರ್ ಸ್ಥಾಪಿಸಿದ ಸೇವಾದಳ ನೂರು ವರ್ಷವಾದರೂ ಅವರ ಆದರ್ಶದ ಅಡಿಯಲ್ಲಿ ಮುಂದುವರೆಯುತ್ತಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ, ವಿಭಾಗೀಯ ಸಂಘಟಕ ವಿದ್ಯಾಸಾಗರ್ ಚಿನಮಗೇರಿ, ಶಿಕ್ಷಕ ಉಮೇಶ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net