ಹರ್ ಘರ್ ತಿರಂಗಾ ಯಾತ್ರೆ

Noubad Tiranga Yatra photo
Published on

ಬೀದರ್: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಇಲ್ಲಿಯ ನೌಬಾದ್‍ನಲ್ಲಿ ಹರ್ ಘರ್ ತಿರಂಗಾ ಯಾತ್ರೆ ನಡೆಯಿತು. ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು. ಯಾತ್ರೆಯ ಉದ್ದಕ್ಕೂ ಬೋಲೋ ಭಾರತ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಉಚಿತವಾಗಿ ವಿತರಿಸಲಾಯಿತು.
ಇದಕ್ಕೂ ಮುನ್ನ ಯಾತ್ರೆಗೆ ಚಾಲನೆ ನೀಡಿದ ಬೇಮಳಖೇಡ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಡಾ. ರಾಜಶೇಖರ ಶಿವಾಚಾರ್ಯರು, ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನದಿಂದಾಗಿಯೇ ನಾವು ಇಂದು ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಿದೆ ಎಂದು ನುಡಿದರು.
ನಗರಸಭೆ ಸದಸ್ಯೆ ಮಹಾದೇವಿ ಬಸವರಾಜ ಹುಮನಾಬಾದೆ, ಯುವ ಮುಖಂಡ ತರುಣ್ ಸೂರ್ಯಕಾಂತ ನಾಗಮಾರಪಳ್ಳಿ, ಸಂಗಮೇಶ ಹುಮನಾಬಾದೆ, ಬಸವರಾಜ ಹುಮನಾಬಾದೆ, ಕಂಟೆಪ್ಪ ಭಂಗೂರೆ, ವೀರೇಶ ಹುಮನಾಬಾದೆ, ಜಗದೀಶ ಕುಂಬಾರ, ಬಸವರಾಜ ಭಂಗೂರೆ, ಲೋಕೇಶ ಭಂಗೂರೆ, ಸಾಗರ ಚಾವಳೆ, ಮಹೇಶ ಪಾಟೀಲ, ಅವಿನಾಶ ಮೂಲಗೆ, ವಿಶಾಲ ಅತಿವಾಳೆ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net