ಹರ್ ಘರ್ ತಿರಂಗಾ: ಪುರಸಭಾ ಸದಸ್ಯರಿಂದ 2 ತಿಂಗಳ ಗೌರವಧನ ಸಮರ್ಪಣೆ

SKP WEB
Published on

ಶಿಕಾರಿಪುರ: ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ಮನೆ ಮನೆಯ ಮೇಲೂ ರಾಷ್ಟ್ರಧ್ವಜ ಹಾರಬೇಕೆಂಬ ಪ್ರಧಾನಿ ಕನಸು ನನಸಾಗಬೇಕು ಎಂದು ಪುರಸಭೆ ಅದ್ಯಕ್ಷೆ ರೇಖಾಬಾಯಿ ಮಂಜುಸಿಂಗ್ ಹೇಳಿದರು.

ಒಂದನೇ ವಾರ್ಡ್‌ನಲ್ಲಿ ಬುಧವಾರ ತ್ರಿವರ್ಣ ಧ್ವಜ ವಿತರಿಸಿ ಮಾತನಾಡಿ, ಪುರಸಭೆಯ ಎಲ್ಲ ಸದಸ್ಯರು ಎರಡು ತಿಂಗಳ ಗೌರವಧನವನ್ನು ಬಳಸಿಕೊಂಡು ಪಟ್ಟಣದ ಪ್ರತಿ ಮನೆಗೆ ಧ್ವಜ ನೀಡುತ್ತಿದ್ದೇವೆ. ಒಟ್ಟು 8 ಸಾವಿರ ತ್ರಿವರ್ಣ ಧ್ವಜಗಳನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಪುರಸಭೆ ಸದಸ್ಯ ಜೀನಳ್ಳಿ ಪ್ರಶಾಂತ್ ಮಾತನಾಡಿ, ನಮ್ಮ ತಾಲೂಕು ಸ್ವಾತಂತ್ರ್ಯ ಸೇನಾನಿಗಳಿಗೆ ಜನ್ಮವಿತ್ತ ವೀರಭೂಮಿ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮೊದಲ ಬಾರಿಗೆ ಸ್ವತಂತ್ರ ಘೋಷಿಸಿಕೊಂಡ ಈಸೂರಿನ ಹೆಮ್ಮೆಯ ಪುತ್ರರು ಜನಿಸಿದ ನಾಡಿದು. ದೇಶಪ್ರೇಮದ ಸಾಕ್ಷಿರೂಪವಾಗಿರುವ ಈಸೂರಿನ ಕಲಿಗಳು ಯಾವಾಗಲೂ ನಮಗೆ ಮಾದರಿ ಎಂದರು.

ಪುರಸಭಾ ಸದಸ್ಯೆಯರಾದ ರೂಪಕಲಾ ಹೆಗ್ಡೆ, ರೂಪಾ ಮಂಜುನಾಥ್, ಉಮಾ, ಮಖಂಡರಾದ ಮಂಜುಸಿಂಗ್, ಶ್ರೀಧರ್ ಹೆಗ್ಡೆ, ಸುರೇಶ್, ಆಯನೂರ್ ಕೃಷ್ಣ, ಜಾಬಿವುಲ್ಲಾ, ಇಸ್ಮಾಹಿಲ್, ಅಧಿಕಾರಿಗಳಾದ ರಾಜ್‌ಕುಮಾರ್, ಪರಶುರಾಮ, ಅರುಣ್ ಕುಮಾರ್, ಸಿದ್ದಪ್ಪ, ಸುಭಾಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net