

ಶ್ರೀಮಂಗಲ: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿಂದ ಹರಿಹರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಏಪ್ರಿಲ್ 1 ರಿಂದ 9 ರವರೆಗೆ ಆಯೋಜಿಸಿರುವ ಕೊಡವ ಕೌಟುಂಬಿಕ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಶುಕ್ರವಾರ ಅನಾವರಣಗೊಳಿಸಲಾಯಿತು.
ಬಾಚೀರ ಕುಟುಂಬದ ಅಧ್ಯಕ್ಷರಾದ ಸುಜಾಉತ್ತಯ್ಯ ಮತ್ತು ಪಂದ್ಯಾವಳಿಯ ಅಧ್ಯಕ್ಷರಾದ ಕಾರ್ಯಪ್ಪ ಅವರ ನೇತೃತ್ವದಲ್ಲಿ ಟಿ.ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಗಣದಲ್ಲಿ ಲಾಂಛನ ಬಿಡುಗಡೆ ಮಾಡಿದರು.
ಈ ಸಂದರ್ಭ ಮಾತನಾಡಿದ ಕಾರ್ಯಪ್ಪ ಅವರು ಪ್ರವೇಶಾತಿಗೆ ಹಾಗೂ ಹೆಚ್ಚಿನ ವಿವರಕ್ಕೆ ಕುಶಾಲಪ್ಪ ಮೊ.9972355222, ರಾಜಉತ್ತಪ್ಪ ಮೊ.9880161887 ಮೂಲಕ ಸಂಪರ್ಕಿಸಲು ಕೋರಿದರು. ಕ್ರೀಡಾಕೂಟ ಕಾರ್ಯನಿರ್ವಹಣಾಧಿಕಾರಿ ರಾಜಉತ್ತಪ್ಪ, ಕಾರ್ಯದರ್ಶಿ ವಾಸು ದೇವಯ್ಯ, ಕುಟುಂಬದ ಸುರಕ್ಷಾ,ಸಂಪತ್, ಅಶ್ವಿನಿ ಸಂಪತ್, ನಿರನ್‌ನಾಣಯ್ಯ, ಜಸ್ಮಿ, ಸ್ವಾಗತ್, ಅಮನ್ ಸುಬ್ಬಯ್ಯ ಇತರರಿದ್ದರು.