ಹರಿಸ್ಮರಣೆ ಸ್ಪರ್ಧೆ ಸಂಪನ್ನ

adhikmasaclosing
Published on

ಧಾರವಾಡ: ಅಧಿಕ ಮಾಸದ ನಿಮಿತ್ತ ನಗರದ ದೇಸಾಯಿ ಗಲ್ಲಿ ವಿಠ್ಠಲ ಮಂದಿರದಲ್ಲಿ 30 ದಿನಗಳ ಕಾಲ ಏರ್ಪಡಿಸಿದ್ದ ಭಜನಾ ಮಂಡಳಿಯಿಂದ ನಿತ್ಯ 33 ಹಾಡುಗಳ ಹರಿಸ್ಮರಣೆ ಸ್ಪರ್ಧೆ ಕಾರ್ಯಕ್ರಮದ ಮಂಗಳೋತ್ಸವ ಇತ್ತೀಚೆಗೆ ಜರುಗಿತು.
ಅತಿಥಿಗಳಾಗಿ ಗೋಪಾಲ ಕುಲಕರ್ಣಿ, ಪಂ. ಬಂಡಾಚಾರ್ಯ ಗಿಡದಹುಬ್ಬಳ್ಳಿ ಪಾಲ್ಗೊಂಡಿದ್ದರು. ಗೌ. ಕಾರ್ಯಾಧ್ಯಕ್ಷ ಎಸ್.ಬಿ. ಗುತ್ತಲ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆ ನಿರ್ಣಾಯಕರಾಗಿ ಮನೋಹರ ಕುಲಕರ್ಣಿ ಹಾಗೂ ವಾದಿರಾಜ ದಂಡಾಪುರ ಕಾರ್ಯ ನಿರ್ವಹಿಸಿದರು.
24 ಭಜನಾ ಮಂಡಳಿಗಳು ಭಾಗವಹಿಸಿದ್ದವು. ವಿಶ್ವಮಧ್ವ ಪಾರಾಯಣ ಮಂಡಳಿ (ಪ್ರಥಮ), ತೇಜಸ್ವಿನಿ ಭಜನಾ ಮಂಡಳಿ (ದ್ವಿತೀಯ), ಶ್ರೀ ರಾಮ ಭಜನಾ ಮಂಡಳಿ (ತೃತೀಯ) ಬಹುಮಾನ ಪಡೆದವು. ನಂತರ ಗೀತಾ ಆಲೂರ ದಾಸವಾಣಿ ಪ್ರಸ್ತುತಪಡಿಸಿದರು.
ವೆಂಕಟೇಶ ಉಪಾಧ್ಯಾಯ, ಶ್ಯಾಮ ನಾಡಗೌಡ, ದಾಮೋದರಾಚಾರ್ಯ ಪಾಮಡಿ, ಎಚ್. ವಾದಿರಾಜಾಚಾರ್ಯ, ವಂದನಾ ಉಪಾಧ್ಯ, ಕಾಂಚನಾ ಕಟ್ಟಿ, ಅನನ್ಯಾ ಪಾಮಡಿ, ಇತರರು ಇದ್ದರು. ವಾದಿರಾಜ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net