ಹರವಾಳ ಪಿಕೆಪಿಎಸ್‌ಗೆ ಬಲವಂತರಾವ್ ಅಧ್ಯಕ್ಷ

PH 09
Published on

ಜೇವರ್ಗಿ: ಹರವಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಲವಂತರಾವ್ ಕುಲಕರ್ಣಿ, ಉಪಾಧ್ಯಕ್ಷರಾಗಿ ಶರಣಬಸಪ್ಪ ದೊರೆ ಶನಿವಾರ ಅವಿರೋಧ ಆಯ್ಕೆಯಾಗಿದ್ದಾರೆ.

ಸಂಘದಲ್ಲಿ ಹರವಾಳ ಮತ್ತು ಕುಟನೂರ ಗ್ರಾಮದ 12 ಸದಸ್ಯರಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮನೋಹರ ಎಸ್.ರೇವನೂರ ಪ್ರಕಟಿಸಿದರು. ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಎಲೆಕ್ಷನ್ ಕಾರ್ಯ ಮಾಡಿದರು.

ಗ್ರಾಪಂ ಅಧ್ಯಕ್ಷ ಮಹಾಂತೇಶ ಮದರಿ, ಪ್ರಮುಖರಾದ ಎಂ.ಬಿ. ಪಾಟೀಲ್ ಹರವಾಳ, ಡಾ.ಶಿವರಾಜ ಪಾಟೀಲ್, ಬೈಲಪ್ಪ ನೆಲೋಗಿ, ಬಸವರಾಜ, ಬಾಳಾಸಾಬ್ ಪಾಟೀಲ್, ಶಿವಾನಂದ ತಳವಾರ, ಶಿವಪುತ್ರಪ್ಪ ಕೋಣಿನ್, ಶರಣಬಸಪ್ಪ ಜಗಲಿಮನಿ, ರಾಘವೇಂದ್ರ ಇನಾಮದಾರ್, ಸಂತೋಷ ದೊರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net