ಹರಳುಕೋಟೆಯಲ್ಲಿ ಹನುಮ ಜಯಂತಿ ಮಹೋತ್ಸವ ಆಚರಣೆ

IMG-20241213-WA0054
Published on

ಚಾಮರಾಜನಗರ: ಬಬ್ರುವಾಹನ ಪಟ್ಟಣ ಹಿಂದೆ ಖ್ಯಾತಿ ಪಡೆದಿರುವ ರಾಮಸಮುದ್ರದಲ್ಲಿರುವ ಶ್ರೀ ಹರಳುಕೋಟೆ ಅಭಯ ಪ್ರದಾಯಕ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಇಂದು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆಯಿಂದಲೇ ದೇವರಿಗೆ ಅಭಿಷೇಕ ವಿಶೇಷ ಹೂವಿನ ಅಲಂಕಾರ ಪೂಜೆ ನಂತರ ಮಹಾಮಂಗಳಾರತಿ ನಡೆಯಿತು. ಹನುಮ ಜಯಂತಿ ಅಂಗವಾಗಿ ಚಾಮರಾಜನಗರ ಸೇರಿದಂತೆ ವಿವಿಧ ಗ್ರಾಮಗಳಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಇಷ್ಟಾರ್ಥಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಹರಳು ಕೋಟೆ ಸಮೀಪದ ಜನಾರ್ದನ ಸ್ವಾಮಿ ದೇವಾಲಯ ಹಾಗೂ ಮಹಾಲಕ್ಷ್ಮಿ ದೇವಾಲಯಗಳ ಲ್ಲೂ ಸಹ ಪೂಜಾ ಕಾರ್ಯಕ್ರಮಗಳು ನಡೆದು ಭಕ್ತರು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net