

ಹರಪನಹಳ್ಳಿ: ಪಟ್ಟಣದ ಮಠದ ಕೇರಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಗುರುರಾಯರ ರಥೋತ್ಸವ ಮಂಗಳವಾರ ಶ್ರದ್ಧೆ-ಭಕ್ತಿಯಿಂದ ಜರುಗಿತು.
ಬೆಳಗ್ಗೆ ಅಷ್ಟೋತ್ತರ ಪಾರಾಯಣ, ನಂತರ ಫಲ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಠದ ಆವರಣದಲ್ಲಿ ರಾಯರ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಭಜನೆಯೊಂದಿಗೆ, ಗುರುರಾಯರ ಸ್ತೋತ್ರಗಳನ್ನು ಪಠಿಸಲಾಯಿತು, ರಾಯರ ಬೃಂದಾವನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಪ್ರಮುಖರಾದ ಬಿ.ಶ್ರೀನಿಧಿ, ಟಿ.ವ್ಯಾಸರಾಜ, ಕೃಷ್ಣಪ್ರಸಾದ್, ಸಂಡೂರು ಭರತ, ಅಜಿತ್ ಸಂಡೂರು, ಆರ್.ಶ್ರೀಕಾಂತ, ಬಿ.ಮಾಧವರಾವ್, ವೆಂಕಟೇಶ ಇತರರಿದ್ದರು.