

ಹರಪನಹಳ್ಳಿ: ಸ್ಥಳೀಯ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಮಂಡಳಿಯ 14 ನಿರ್ದೇಶಕರ ಆಯ್ಕೆಗೆ ನಗರದ ಹಿರೇಕೆರೆ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಮತದಾನ ನಡೆಯಿತು.
ಎ ವಿಭಾಗದ ಎಂಟು ಸ್ಥಾನಗಳಿಗೆ 13 ಜನ ಸ್ಪರ್ಧಿಸಿದ್ದು, 27 ಮತಾದರರ ಪೈಕಿ 26 ಸದಸ್ಯರು ಮತ ಚಲಾಯಿಸಿದರು. ಬಿ ವಿಭಾಗದ ಆರು ಸ್ಥಾನಗಳಿಗೆ 13 ಜನ ಸ್ಪರ್ಧಿಸಿದ್ದರು. 725 ಮತದಾರರ ಪೈಕಿ 700 ಸದಸ್ಯರು ಮತ ಚಲಾಯಿಸಿದರು. ಹೈಕೋರ್ಟ್ ಮೊರೆ ಹೋಗಿ ಮತದಾನಕ್ಕೆ ಅರ್ಹತೆ ಪಡೆದಿದ್ದ 260 ಜನ ಮತದಾರರ ಪೈಕಿ 176 ಮಂದಿ ಮತ ಚಲಾಯಿಸಿದರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹಾಗೂ ಅವರ ಪತಿ ಎಚ್.ಎಂ.ಮಲ್ಲಿಕಾರ್ಜುನ್ ಮತ ಚಲಾಯಿಸಿದರು. ಜಿ.ಎಸ್.ಸುರೇಂದ್ರ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.