

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸಂಕ್ರಾಂತಿ ಹಬ್ಬದ ಉತ್ಸವ ನಡೆಯಿತು.
ಕಳೆದ 70 ವರ್ಷಗಳಿಂದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿಯ ಉತ್ಸವವನ್ನು ಸೇವಾರ್ಥದಾರರಾದ ದಿ.ಬಾಲಸುಬ್ರಹ್ಮಣ್ಯ ಮಾಸ್ಟರ್ ಅವರ ಕುಟುಂಬ ವರ್ಗದಿಂದ ಸಂಕ್ರಾಂತಿಯ ಉತ್ಸವವನ್ನು ನಡೆಸಿಕೊಂಡು ನಡೆಸಿಕೊಂಡು ಬರಲಾಗುತ್ತಿದೆ.
ಅದರಂತೆ ಈ ವರ್ಷವೂ ಸಂಕ್ರಾಂತಿಯ ಹಬ್ಬದಂದು ಶ್ರೀವೇಣುಗೋಲಸ್ವಾಮಿಗೆ ವಿಶೇಷ ಪೂಜಾಕಯಂಕರ್ಯಗಳನ್ನು ನೆರವೇರಿಸುವ ಮೂಲಕ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀರಾಜಗೋಪಾಲ್, ಸ್ವಾಮಿ ವಿವೇಕಾನಂದ ಪಾಠ ಶಾಲೆಯ ಸದಸ್ಯರು, ವಿನಾಯಕ ಭಕ್ತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.