

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರರ ಜಯಂತಿ ಆಚರಿಸಲಾಯಿತು.
ಗ್ರಾಪಂ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರದ ಮುಂದೆ ದೀಪ ಬೆಳಗಿ ಪುಷ್ಪಾರ್ಚನೆ ನೆರವೇರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ವರಿ, ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಶ್ರೀಕಾಂತ್, ಬಿಲ್ ಕಲೆಕ್ಟರ್ ಸಂತೋಷ್, ಅಟೆಂಡರ್ ಕೆಂಪಶೆಟ್ಟಿ, ಸದಸ್ಯರಾದ ಕೇಶವಮೂರ್ತಿ, ಯೋಗ ನರಸಿಂಹ ಸ್ವಾಮಿ, ನವೀನ್ ಕುಮಾರ್, ಬಂಡಿಗೆರೆ ಗ್ರಾಮದ ಜಯಸ್ವಾಮಿ ಮತ್ತು ಗ್ರಾಮಸ್ಥರು ಹಾಜರಿದ್ದರು.