

ಉತ್ತಮ ಪ್ರದರ್ಶನ ನೀಡಿದ ವಿಆರ್‌ಎಲ್ ಸಂಸ್ಥೆಯ ಮೈಸೂರಿನ ಹಮಾಲಿಗಳ ಬುಲೆಟ್ ಬಾಯ್ಸ ತಂಡವು ‘ಶಾಸಕ ಕೆ.ಹರೀಶ್ ಗೌಡ’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಆರ್‌ಎಲ್ ಫ್ರೆಂಡ್ಸ್ ಟು ಫ್ರೆಂಡ್ಸ್ ಗೆಳೆಯರ ಬಳಗದ ವತಿಯಿಂದ ಭಾನುವಾರ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಫೈನಲ್ ಪಂದ್ಯದಲ್ಲಿ ಅನಂತ್‌ಕುಮಾರ್ ನಾಯಕತ್ವದ ಬುಲೆಟ್ ಬಾಯ್ಸ ತಂಡವು 18 ರನ್‌ಗಳಿಂದ ವಿಆರ್‌ಎಲ್ ಬೆಂಗಳೂರು ಸಿಬ್ಬಂದಿಗಳ ಸ್ಟಾರ್ ಬಾಯ್ಸ ತಂಡವನ್ನು ಸೋಲಿಸಿತು. ಅದರೊಂದಿಗೆ 25 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಸ್ಟಾರ್ ಬಾಯ್ಸ ತಂಡವು 15 ಸಾವಿರ ರೂ. ನಗದು ಬಹುಮಾನ ಪಡೆಯಿತು.
ಅಂತಿಮ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಬುಲೆಟ್ ಬಾಯ್ಸ ತಂಡವು ನಿಗದಿತ 8 ಓವರ್‌ಗಳಲ್ಲಿ 4 ವಿಕೆಟ್‌ಗೆ 82ರನ್ ಪೇರಿಸಿತು. ಪ್ರತಿಯಾಗಿ ಸ್ಟಾರ್ ಬಾಯ್ಸ ತಂಡ 65 ರನ್ ಮಾತ್ರ ಕಲೆಹಾಕುವಲ್ಲಿ ಶಕ್ತವಾಯಿತು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗೆಲುವ ಪಡೆದ ತಂಡಕ್ಕೆ ಶಾಸಕ ಕೆ.ಹರೀಶ್‌ಗೌಡ ಬಹುಮಾನ ವಿತರಿಸಿದರು. ವಿಆರ್‌ಎಲ್ ಜಿಎಂ ಅಶೋಕ್ ಯಂಡಿಗೇರಿ ಇತರರಿದ್ದರು.
ವಿಆರ್‌ಎಲ್ ಮೈಸೂರಿನ ಉದ್ಯೋಗಿಗಳು ತಂಡ ಹಾಗೂ ವಿಆರ್‌ಎಲ್ ಚಾಲಕರ ತಂಡಗಳು ಭಾಗವಹಿಸಿದ್ದವು.