

ರಾಯಚೂರು: ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಹಮಾಲಿ ಕಾರ್ಮಿಕರಿಗೆ ಸರ್ಕಾರದ ಅಸೂಚನೆಯಂತೆ ಹಮಾಲಿ ದರ ನೀಡದ ವ್ಯಾಪಾರಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಐಟಿಯು ಒತ್ತಾಯಿಸಿದೆ.
ಸಂಘಟನೆ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮಂಗಳವಾರ ಮನವಿ ಸಲ್ಲಿಸಿ, ಸರ್ಕಾರ ಅಸೂಚನೆಯಂತೆ ಹಮಾಲಿ ದರ ನೀಡುವಂತೆ ಮೂರು ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ಕ್ರಮವಾಗಿಲ್ಲ ಎಂದು ದೂರಿದರು.
ಪಟ್ಟಣದಲ್ಲಿ ಹಲವು ವ್ಯಾಪಾರಸ್ಥರು ಅಸೂಚನೆಯಂತೆ ಹಮಾಲಿ ದರ ನೀಡುವ ಕುರಿತು ಲಿಂಗಸುಗೂರು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರ ಸಭೆ ನಡೆಸಿ ಹಮಾಲಿ ದರವನ್ನು ನಿಗದಿಪಡಿಸಿ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿತ್ತು.
ಆದರೆ ಸಭೆಯಲ್ಲಿ ತೀರ್ಮಾನಗಳನ್ನು ವ್ಯಾಪಾರಸ್ಥರು ಜಾರಿಗೊಳಿಸದೆ ಕಾರ್ಮಿಕರ ಶೋಷಣೆ ನಡೆಸುತ್ತಿದ್ದು, ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕೆಲಸಕ್ಕೆ ಬಾರದಂತೆ ತಿಳಿಸಿ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಹಮಾಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತತಿದೆ.
ಸರ್ಕಾರದ ಅಸೂಚನೆ ಉಲ್ಲಂಸುತ್ತಿರುವ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಂಡು ನಿಗದಿತ ಹಮಾಲಿ ದರ ನೀಡುವಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಪದಾಕಾರಿಗಳಾದ ಕೆ.ಜಿ.ವೀರೇಶ, ವರಲಕ್ಷ್ಮಿ ಇದ್ದರು.