

ಹೊಳೆಹೊನ್ನೂರು: ಹಿಂದುಗಳು ಆಚರಿಸುವ ಹಬ್ಬಗಳು ಸಂಸ್ಕೃತಿಯ ಪ್ರತೀಕ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ ರಕ್ಷಾ ಬಂಧನದಲ್ಲಿ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತಿಯ ದ್ಯೋತಕವಾಗಿರುವ ಹಬ್ಬಗಳು ನಾಡಿನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಹಿಂದುಗಳ ವಿಶಿಷ್ಟ ಆಚರಣೆಗಳು ವಿಶ್ವದ ಗಮನ ಸೆಳೆಯುತ್ತಿವೆ. ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯಿಸಿ ಆಚರಣೆಗಳನ್ನು ಮುನ್ನೆಲೆಗೆ ತರಬೇಕು. ಪ್ರತಿಯೊಬ್ಬರೂ ರಕ್ಷ ಬಂಧನದ ಮಹತ್ವ ತಿಳಿಯಬೇಕು. ನಾವು ನಮ್ಮತನವನ್ನು ಎಂದಿಗೂ ಕಳೆದುಕೊಳ್ಳಬಾರದು. ಅನ್ಯದೇಶಿಯ ಸಂಸ್ಕೃತಿಗಳನ್ನು ಪ್ರೀತಿಸಿ ನಮ್ಮ ಸಂಸ್ಕೃತಿಯನ್ನು ಆರಾಸಬೇಕು ಎಂದರು. ಠಾಣೆಯ ಸಿಪಿಐ ಶಿವಪ್ರಸಾದ್, ಕೃಷ್ಣನಾಯ್ಕ, ಪ್ರಕಾಶ್‌ನಾಯ್ಕ, ಮಂಜುನಾಥ್, ಸುಬ್ರಮಣಿ, ರಾಧಾಕೃಷ್ಣ, ಶಾಂತಮ್ಮ, ಸಿದ್ದಪ್ಪ, ರಂಗಪ್ಪ, ರಂಗನಾಥ್‌ರಾವ್, ಎ.ಕೆ.ರಮೇಶ್, ಭೈರೇಶ್ ಇತರರಿದ್ದರು.