ಹಬ್ಬಗಳು ಭಕ್ತಿ, ಶಾಂತಿಯ ಪ್ರತೀಕ

UNTILETED (10)
ದೇವದುರ್ಗದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಶಾಂತಿಸಭೆ ನಡೆಯಿತು. ಹೆಚ್ಚುವರಿ ಎಸ್ಪಿ ಬಿ.ಹರೀಶ, ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ್, ಸಿಪಿಐ ಎನ್.ವೈ.ಗುಂಡೂರಾವ್, ಪಿಐ ಎಸ್.ಮಂಜುನಾಥ, ತಾಪಂ ಇಒ ಬಸವರಾಜ ಹಟ್ಟಿ, ಟಿಎಚ್‌ಒ ಡಾ.ಬನದೇಶ್ವರ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಜೆಸ್ಕಾಂ ಎಇಇ ವೆಂಕಟೇಶ ಚಿಲ್ಕರಾಗಿ ಇದ್ದರು.
Published on

ದೇವದುರ್ಗ: ಭಾರತೀಯ ಹಬ್ಬಗಳು ಶ್ರದ್ಧಾಭಕ್ತಿ, ಶಾಂತಿ, ಸಾಮರಸ್ಯದ ಪ್ರತೀಕವಾಗಿವೆ. ಎಲ್ಲ ಜಾತಿ, ಧರ್ಮದವರು ಹಬ್ಬವನ್ನು ಸೌಹಾರ್ದದಿಂದ ಆಚರಣೆ ಮಾಡಲಿ ಎಂದು ಹೆಚ್ಚುವರಿ ಎಸ್ಪಿ ಬಿ.ಹರೀಶ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಗುರುವಾರ ಮಾತನಾಡಿದರು. ಹಿಂದು, ಮುಸ್ಲಿಮರು, ಕ್ರಿಶ್ಚಿಯನ್ನರು ಸಹೋದರಂತೆ ಜೀವನ ನಡೆಸಬೇಕು. ಹಬ್ಬ ಇರುವುದು ಭಕ್ತಿಯ ಜತೆಗೆ ಸಂಭ್ರಮಿಸಲು. ಗಲಾಟೆ, ಜಗಳವಾಡಲು ಅಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಹಬ್ಬ ಆಚರಣೆ ನೆಪದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ನಿರ್ಧಾಕ್ಷ್ಯಿಣವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಗಣೇಶ ಹಬ್ಬದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘಟನೆಗಳ ಮುಖಂಡರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಸ್ಥಳೀಯ ಪುರಸಭೆ, ಗ್ರಾಪಂ, ಜೆಸ್ಕಾಂ ಹಾಗೂ ಪೊಲೀಸರ ಅನುಮತಿ ಪಡೆಯಬೇಕು. ಪೊಲೀಸರು ಸೂಚಿಸುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲನೆ ಮಾಡಬೇಕು. ಗಣೇಶ ವಿಸರ್ಜನೆ 9ನೇ ದಿನ, ಈದ್ ಮಿಲಾದ್ ಹಬ್ಬ ಒಂದೇ ದಿನ ಬರಲಿವೆ. ಈ ಸಂದರ್ಭದಲ್ಲಿ ಸಮಾಜದ ಹಿರಿಯಲು ಶಾಂತಿಯುತ ಹಬ್ಬ ಆಚರಣೆ ಯುವಕರಿಗೆ ತಿಳಿ ಹೇಳಬೇಕು. ಶಾಂತಿ ಸ್ಥಾಪನೆಗೆ ಪೊಲೀಸರಿಗೆ ಜನರ ಸಹಕಾರ ಅಗತ್ಯ ಎಂದರು.

ಡಿವೈಎಸ್‌ಪಿ ದತ್ತಾತ್ರೇಯ ಕರ್ನಾಡ್, ಸಿಪಿಐ ಎನ್.ವೈ.ಗುಂಡೂರಾವ್, ಪಿಐ ಎಸ್.ಮಂಜುನಾಥ, ತಾಪಂ ಇಒ ಬಸವರಾಜ ಹಟ್ಟಿ, ಟಿಎಚ್‌ಒ ಡಾ.ಬನದೇಶ್ವರ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಸಮಾಜ ಕಲ್ಯಾಣಾಧಿಕಾರಿ ರಾಜ್‌ಕುಮಾರ ಡೋಣಿ, ಜೆಸ್ಕಾಂ ಪ್ರಭಾರ ಎಇಇ ವೆಂಕಟೇಶ ಚಿಲ್ಕರಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net