ಹಬ್ಬಗಳು ದೇಶದ ಏಕತೆಯ ಅಸ್ಮಿತೆಗಳು

Published on

ಬಾಗಲಕೋಟೆ: ಭಾರತೀಯ ಹಬ್ಬಗಳು ದೇಶದ ಏಕತೆಯ ಅಸ್ಮಿತೆಗಳಾಗಿದ್ದು, ವಿಶೇಷವಾಗಿ ಸಂಕ್ರಾAತಿ ಪ್ರಕೃತಿಯ ಆವರ್ತಕ ಲಯ , ಜೀವನ ಮತ್ತು ಸಮೃದ್ಧಿಯ ನವೀಕರಣದಲ್ಲಿ ಸಾಮೂಹಿಕ ಏಕತೆಯನ್ನು ಸೂಚಿಸುತ್ತದೆ ಎಂದು ಬಸವೇಶ್ವ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ೩ ದಿನಗಳ ಸಾಂಸ್ಕೃತಿಕ ಹಬ್ಬದ ನಿಮಿತ್ಯ ಸಂಕ್ರಾAತಿ ಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶೈಕ್ಷಣಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವ ಮತ್ತು ಅವುಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ೩ ದಿನಗಳ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಂಡಿದೆ. ಸಂಕ್ರಾAತಿ ಸಿರಿಯಲ್ಲಿ ಮಕರ ಸಂಕ್ರಮಣ ಆಚರಣೆ, ದೇಶಿ ವೇಷÀಭೂಷಣ ಮತ್ತು ಸಾಮೂಹಿಕ ದೇಶಿ ಭೋಜನಗಳನ್ನು ವಿದ್ಯಾರ್ಥಿಗಳಿಗೆ ಅಯೋಜನೆ ಮಾಡಲಾಗಿದೆ. ಸಾಮೂಹಿಕ ಭೋಜನೆ, ಹಬ್ಬಗಳ ಆಚರಣೆಯಿಂದ ಪರಸ್ಪರ ಬ್ರಾತೃತ್ವ ಬೆಳೆದು ನಾವೆಲ್ಲರೂ ಒಂದೇ ಎನ್ನುವ ಭಾವ ಮೂಡುತ್ತದೆ. ಮಕರ ಸಂಕ್ರಾAತಿಯ ಸಾರವು ಅದರ ಸಾಂಕೇತಿಕ ಅರ್ಥದಲ್ಲಿದೆ ಎಂದರು.

ಭಾರತದ ಸಂಸ್ಕೃತಿ, ಧರ್ಮ ಮತ್ತು ಕೃಷಿಯೊಂದಿಗೆ ಆಳವಾಗಿ ಸಂಬAಧ ಹೊಂದಿರುವ ಹಬ್ಬವಾಗಿದೆ. ಮಕರ ಸಂಕ್ರಾAತಿ ಹಬ್ಬವು ಭಾರತದಾದ್ಯಂತ ವೈವಿಧ್ಯಮಯ ಸಮುದಾಯಗಳನ್ನು ಒಂದುಗೂಡಿಸುತ್ತದೆ. ಸೂರ್ಯನ ಉತ್ತರದ ಪ್ರಯಾಣವನ್ನು ಮಾತ್ರವಲ್ಲದೆ ನವೀಕರಣ, ಸಮೃದ್ಧಿ ಮತ್ತು ಕೌಟುಂಬಿಕ ಬಂಧಗಳನ್ನು ಬಲಪಡಿಸುವ ಭರವಸೆಯನ್ನು ನೀಡುವುದರ ಜೊತೆÀಗೆ ಸಮೃದ್ಧಿಯ ಸಂತೋಷವನ್ನು ಹಂಚಿಕೊಳ್ಳುತ್ತದೆ ಮತ್ತು ಸಾಮೂಹಿಕ ಕೃತಜ್ಞತೆಯ ಭಾವವನ್ನು ಬೆಳೆಸುತ್ತದೆ ಎಂದರು.

ಸAಚಾಲಕರಾದ ಡಾ.ಆರ್.ಎಂ.ಬೆಣ್ಣೂರ, ಆರ್.ಆರ್.ಅರಷಿಣಗುಡಿ, ವಿ.ಆರ್.ಹಿರೇಮಠ, ಎಂ.ಆರ್.ಮಲಕಶೆಟ್ಟ, ಸಂಗೀತಾ ಪವಾರ, ಜಯಶ್ರೀ ದಿವಟೆ, ಎಸ್.ಬಿ.ಕಮತೆ, ಶ್ರೇಯಾ ಜೋರಾಪುರ, ವಿ.ಎಸ್.ಚಿಗರಿ, ಎಂ.ಬಿ.ಜಮಾದಾರ, ಸಂತೋಷ ಸುಭಾಂಜಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net