ಹುತ್ರಿದುರ್ಗ: ಊರ ಹಬ್ಬಕ್ಕೆಂದು ಊರಿಗೆ ಬಂದಿದ್ದ ಯುವತಿ ಹಬ್ಬ ಮುಗಿಸಿಕೊಂಡು ಮಂಗಳೂರಿನ ಕಾಲೇಜಿಗೆ ತೇರಳುತ್ತಿದ್ದ ವೇಳೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ರಸ್ತೆ ಅಪಘಾತವಾಗಿ ಯುವತಿ ಸ್ಥಳದಲ್ಲಿ ಮೃಪಟ್ಟಿದ್ದಾಳೆ. ಮಾಗಡಿ ತಾಲೂಕಿನ ಬ್ಯಾಡರಹಳ್ಳಿಯ ಧನುಶ್ರೀ (19) ಮೃತೆ. ಅಣ್ಣ ರೇಣುಕೇಶ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಯುವತಿ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಧನುಶ್ರೀ ಊರ ಹಬ್ಬಕ್ಕೆಂದು ಆಗಮಿಸಿದ್ದಳು. ಗ್ರಾಮದಲ್ಲಿ ಹಬ್ಬ ಮುಗಿಸಿಕೊಂಡು ಮಂಗಳೂರಿಗೆ ತೆರಳುವ ಸಲುವಾಗಿ ಕುಣಿಗಲ್ ಪಟ್ಟಣದ ರೈಲು ನಿಲ್ದಾಣಕ್ಕೆ ರೈಲು ಅಣ್ಣನೊಂದಿಗೆ ಬೈಕ್ನಲ್ಲಿ ತೆರಳುವಾಗ ಕುಣಿಗಲ್ ಪಟ್ಟಣದ ಅಂಚೆಪಾಳ್ಯ ಕೈಗಾರಿಕ ಪ್ರದೇಶದ ಬಳಿ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕನ ಅಜಾಗರುಕತೆಯಿಂದ ಡಿಕ್ಕಿ ಹೊಡೆದಿದೆ. ಬೈಕ್ನಿಂದ ಕೆಳಗೆ ಬಿದ್ದಿದ್ದ ಯುವತಿಯ ತಲೆಯ ಮೇಲೆ ಕ್ಯಾಂಟರ್ ಹರಿದು ಯುವತಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ವೈ.ಎನ್.ಹೊಸಕೋಟೆ: ಹೋಬಳಿಯ ತಿಮ್ಮಮ್ಮನಹಳ್ಳಿಯಲ್ಲಿ ಮಂಗಳವಾರ ಮಣ್ಣು ತುಂಬಿದ ಟ್ರಾ$್ಯಕ್ಟರ್ ಡಿಕ್ಕಿಯಾಗಿ 6 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟದ್ದಾನೆ. ಚಿಕ್ಕಜಾಲೋಡು ಬಾಲಕ ವರುಣ(6) ಶಾಲೆಯ ರಜೆಯ ನಿಮಿತ್ತ ಅಜ್ಜಿಯ ಮನೆಯಾದ ತಿಮ್ಮಮ್ಮನಹಳ್ಳಿಗೆ ಬಂದಿದ್ದು, ರಸ್ತೆಯಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಟ್ರಾ$್ಯಕ್ಟರ್ ಮಗುವಿಗೆ ಡಿಕ್ಕಿ ಹೊಡೆದಿದೆ. ಬಾಲಕ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕನನ್ನು ಹಿಡಿದ ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.