

ನುಗ್ಗೇಹಳ್ಳಿ: ಹಳ್ಳಿಗಳಲ್ಲಿ ಹಬ್ಬ, ಜಾತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳನ್ನು ಒಗ್ಗಟ್ಟಾಗಿ ಆಚರಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಕತ್ತರಿಘಟ್ಟ ಮೇಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ತಿಳಿಸಿದರು.
ಹೋಬಳಿಯ ದೇವಲಾಪುರ ಗ್ರಾಮದ ನಿರ್ಮಿಸಿರುವ ಹೆಬ್ಬಾಗಿಲನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಪೂರ್ವಿಕರು ಹಿಂದಿನಿಂದಲೂ ಗ್ರಾಮಗಳಲ್ಲಿ ಒಗ್ಗಟ್ಟಾಗಿ ಹಬ್ಬ, ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದಾರೆ.
ದೊಡ್ಡ ಕುಟುಂಬದವರು ಕೃಷಿಯನ್ನು ಒಟ್ಟಾಗಿ ಮಾಡಿ ಬಂದ ಲಾಭದಲ್ಲಿ ಕಷ್ಟದಲ್ಲಿರುವ ಬಡವರಿಗೂ ಸಹಕಾರ ನೀಡುತ್ತಿದ್ದರು. ನಾವು ಸಹ ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಹಕಾರ ಮನೋಭಾವದಿಂದ ನಡೆಯಬೇಕು. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಉಪನ್ಯಾಸಕ ರಾಜಶೇಖರ್, ಡಿ.ಸಿ.ನಾಗರಾಜ್, ಡಿ.ಸಿ.ಉಮೇಶ್, ಡಿ.ಎಚ್.ರಂಗನಾಥ್, ಡಿ.ಬಿ. ಶಿವಲಿಂಗೇಗೌಡ, ಡಿ.ಆರ್.ನಾಗೇಶ್, ಡಿ.ಎಚ್. ಸ್ವಾಮಿ, ಡಿ.ಆರ್.ಜ್ಞಾನೇಶ್, ಅರ್ಚಕರಾದ ಚಿಕ್ಕೋನಹಳ್ಳಿ ಶ್ರೀಕಾಂತ್, ರಂಗನಾಥ್, ಸನತ್, ಯೋಗಾನಂದ, ಡಿ.ಸಿ.ಮಂಜೇಗೌಡ, ಮೂಡಲಗಿರಿಗೌಡ ಇತರರು ಹಾಜರಿದ್ದರು.