ಹಬೊಹಳ್ಳಿಯಲ್ಲಿ ಸ್ಟುಡಿಯೋಗೆ ಬೆಂಕಿ

23.HBH. 2
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ತಾಲೂಕು ಕಚೇರಿ ಬಳಿ ಭಾನುವಾರ ರಾತ್ರಿ ಮರಬ್ಬಿಹಾಳ್ ತಾಂಡದ ಮಂಜುನಾಥ ನಾಯ್ಕ ಅವರ ಸ್ಟುಡಿಯೋ ಹಾಗೂ ಜೆರಾಕ್ಸ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಉಪಕರಣಗಳು ಸುಟ್ಟಿವೆ.

ಕಾರ್ಯಕ್ರಮದ ಅಲ್ಬಂ, ಮಂಜುನಾಥ ನಾಯ್ಕ ಅವರ ಕುಟುಂಬದ ವಿವಿಧ ದಾಖಲಾತಿಗಳು ಕೂಡ ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಕೊಟ್ರೇಶ ಭೇಟಿ ನೀಡಿ ಪರಿಶೀಲಿಸಿದರು. ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾರ್ ಸಂಘದ ತಾಲೂಕು ಪದಾಧಿಕಾರಿಗಳು ಪರಿಹಾರ ಕೋಡಿ ಶಾಸಕ ನೇಮಿರಾಜ್ ನಾಯ್ಕ ಹಾಗೂ ತಹಸೀಲ್ದಾರ್ ಕವಿತಾಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net